ಜೆರುಸಲೇಂ/ದುಬೈ: ಯುಎಇನ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತರೆಳುತ್ತಿದ್ದ "ಫ್ಲೈದುಬೈ' ವಿಮಾನವನ್ನು ಹೈಜಾಕ್ ಮಾಡಲು ಯತ್ನಿಸಿದ್ದ ಹಾಗೂ ಭಾರತೀಯ ಸಹ ಪೈಲಟ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ದಾಳಿಕೋರ ಒಮಾನ್‌ನ ಪೈಲಟ್ ಓರ್ವ ಮತಾಂಧ ಹಾಗೂ ಕಟ್ಟರ್ ವಾದಿಯಾಗಿದ್ದ ಎಂದು ಸಹ ಪೈಲಟ್ ಒಬ್ಬರು ತಿಳಿಸಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.
ಸಹ ಪೈಲಟ್ ಮಾತನಾಡಿ, ದಾಳಿಕೋರ ಒಮಾನ್ ಪೈಲಟ್ ಹೆಚ್ಚಾಗಿ ಪ್ರಾರ್ಥನೆಯಲ್ಲೇ ನಿರತನಾಗಿರುತ್ತಿದ್ದ. ಮಹಿಳೆಯರ ಜತೆ ಹಸ್ತಲಾಘವ ಮಾಡಲು ನಿರಾಕರಿಸುತ್ತಿದ್ದ ಎಂದಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಇದೇ ರೀತಿ ಮಾಹಿತಿ ನೀಡಿದ್ದು, ದಾಳಿಕೋರ ಪೈಲಟ್ ಇಸ್ಲಾಮಿಕ್ ಧರ್ಮದ ಪ್ರಭಾವಕ್ಕೆ ಒಳಗಾಗಿದ್ದ ಎಂದಿದ್ದಾರೆ. ಈ ರೀತಿ ಆಗಲು ಹಾಗೂ ಉಗ್ರ ಚಟುವಟಿಕೆ ನಡೆಸಲು ಆತನ ಮೇಲೆ ಯಾರು ಪ್ರಭಾವ ಬೀರಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದಿದ್ದಾರೆ.
ದಾಳಿಕೋರ ಪೈಲಟ್‌ನ ಉದ್ದೇಶ ಹಾಗೂ ಘಟನೆಯ ಬಗ್ಗೆ ಸೌದಿ ಅರೇಬಿಯಾ ಪ್ರಾಥಮಿಕ ತನಿಖೆ ನಡೆಸಲಿದೆ. ಬಳಿಕ ಆತನನ್ನು ಯುಎಇ ಅಧಿಕಾರಿಗಳಿಗೆ ಹಸ್ತಾಂತರಿಲಾಗುತ್ತದೆ ಎಂದು ಹೇಳಿದ ಅಧಿಕಾರಿಗಳು ಈ ದಾಳಿಕೋರನ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ.ದಾಳಿಯ ಉದ್ದೇಶ ಏನಾಗಿತ್ತು ಎಂಬುದರ ಬಗ್ಗೆಯೂ ತನಿಖೆ ಬಳಿಕವಷ್ಟೇ ಮಾಹಿತಿ ನೀಡಲಾಗುತ್ತದೆ ಎಂದಿದ್ದಾರೆ.
ಗಾಯಾಳು ಪೈಲಟ್ ದುಬೈಗೆ ಏರ್‌ಲಿಫ್ಟ್
ದಾಳಿಗೆ ಒಳಗಾದ ಭಾರತದ ಪೈಲಟ್, ಕ್ಯಾಪ್ಟನ್ ಸ್ಮಿತ್ ಮಛ್ಛಾರ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಗುರುವಾರ ಸೌದಿ ಅರೇಬಿಯಾದಿಂದ ದುಬೈ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿದೆ. ದುಬೈನಲ್ಲಿ ಭಾರತೀಯ ರಾಯಭಾರಿ ಸ್ಮಿತ್ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ.
ಸ್ಮಿತ್ ಕುಟುಂಬದ ಜತೆ ಮೋದಿ ಮಾತುಕತೆ
180 ಮಂದಿ ಜೀವ ಉಳಿಸಿದ ಪೈಲಟ್ ಸ್ಮಿತ್ ಅವರ ಕುಟುಂಬದ ಜತೆ ಗುರುವಾರ ಪ್ರಧಾನಿ ನರೇಂದ್ರ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದಾರೆ. ಅವರ ಪತ್ನಿ ಹಾಗೂ ಪೋಷಕರೊಂದಿಗೆ ಮಾತನಾಡಿದ ಮೋದಿ, ಮಛ್ಛಾರ್ ಸಾಹಸ ಮತ್ತು ಧೈರ್ಯವನ್ನು ಶ್ಲಾ ಸಿದರು.
ಪೈಲಟ್ ಸ್ಮಿತ್ ಮಛfರ್‌ಗೆ ಗುಜರಾತ್ ರಾಜ್ಯ ಪ್ರಶಸ್ತಿ
ಗಾಯಗೊಂಡಿದ್ದರೂ ಸಮಯಪ್ರಜ್ಞೆ ಮೆರೆದು 180 ಜೀವ ಉಳಿಸಿದ ಪೈಲಟ್ ಸ್ಮಿತ್ ಮಛ್ಛಾರ್ ಅವರ ಸಾಧನೆಯನ್ನು ಗುರುತಿಸಿ ಗುಜರಾತ್ ರಾಜ್ಯವು, 'ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ'ಯನ್ನು ಘೋಷಿಸಿದೆ. ಇದು 25 ಲಕ್ಷ ರೂ. ನಗದನ್ನೂ ಒಳಗೊಂಡಿದೆ. ಜತೆಗೆ ಸ್ಮಿತ್ ಬೇಗೆ ಗುಣಮುಖರಾಗಲಿ ಎಂದು ಸೋಮನಾಥ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಇಸ್ರೇಲ್‌ನ ನಾಲ್ವರಿಗೆ "ಅಧ್ಯಕ್ಷರ ಪದಕ' ಗೌರವ?
ಹೈಜಾಕ್ ಡ್ರಾಮಾ ನಡೆದ ಫ್ಲೆ„ದುಬೈ ವಿಮಾನದಲ್ಲಿ ಧೈರ್ಯದಿಂದ ಜನರನ್ನು ರಕ್ಷಿಸಲು ಮುಂದೆ ಬಂದ ಇಸ್ರೇಲ್‌ನ ನಾಲ್ವರು ನಾಗರಿಕರನ್ನು ಇಸ್ರೇಲ್ ಅಧ್ಯಕ್ಷರು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ನಾಲ್ವರಿಗೆ ನಾಗರಿಕ ಪ್ರಶಸ್ತಿಯಾದ "ಅಧ್ಯಕ್ಷರ ಪದಕ' ನೀಡಿ ಗೌರವಿಸಲು ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ.
ಪೈಲಟ್ ಮೇಲಿನ ದಾಳಿಗೆ ಚಾಕು ಅಲ್ಲ , ಕೊಡಲಿ ಬಳಕೆ?
ಭಾರತೀಯ ಪೈಲಟ್ ಮೇಲೆ ಒಮಾನ್ ಪೈಲಟ್ ಕೊಡಲಿಯಿಂದ ದಾಳಿ ನಡೆಸಿರುವ ಸಾಧ್ಯತೆ ಇದೆ. ದಾಳಿಕೋರ ಪೈಲಟ್ ಹೊರಗಿನಿಂದ ಚಾಕು ಹೊತ್ತೂಯ್ದಿರಲಿಲ್ಲ. ಬದಲಿಗೆ ಕಾಕ್‌ಪಿಟ್‌ನಲ್ಲಿದ್ದ ಕ್ರಾಶ್ ಆಯಕ್ಸ್(ಕೊಡಲಿ) ಬಳಸಿ ದಾಳಿ ನಡೆಸಿದ್ದಾನೆ ಎನ್ನಲಾಗುತ್ತಿದೆ. ವಿಮಾನ ಅಪಘಾತಕ್ಕೀಡಾದ ಇಲ್ಲವೇ ಬೆಂಕಿ ಹತ್ತಿಕೊಂಡಾಗ ನೆರವಿಗಾಗಿ ಕೊಡಲಿ ಇಟ್ಟಿರುತ್ತಾರೆ. ಈ ಹಿಂದೆ ಪ್ರಧಾನ ಕ್ಯಾಬಿನ್‌ನಲ್ಲಿ ಈ ಕೊಡಲಿ ಇಡಲಾಗುತ್ತಿತ್ತು. 9/11 ಬಳಿಕ ಕಾಕ್‌ಪಿಟ್‌ನಲ್ಲಿ ಅಳವಡಿಸಲಾಯಿತು.

