Dailyhunt Logo
  • Light mode
    Follow system
    Dark mode
    • Play Story
    • App Story
ಫ್ರಾನ್ಸ್‌ : ಪ್ಲಾಸ್ಲಿಕ್‌ ತ್ಯಾಜ್ಯದಿಂದ ತಯಾರಿಸಿದ ಹೂವಿನ ತಡೆಗೋಡೆ ಇವೆಯೇ?

ಫ್ರಾನ್ಸ್‌ : ಪ್ಲಾಸ್ಲಿಕ್‌ ತ್ಯಾಜ್ಯದಿಂದ ತಯಾರಿಸಿದ ಹೂವಿನ ತಡೆಗೋಡೆ ಇವೆಯೇ?

ಹೌದು. ಫ್ರಾನ್ಸ್‌ನಾದ್ಯಂತ ಪುರಸಭೆಗಳು ಮರುಬಳಕೆ ಮಾಡಿದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ರಸ್ತೆಬದಿಯ ಹೂವಿನ ಹೂವಿನ ತಡೆಗೋಡೆಗಳಾಗಿ ಮತ್ತು ಗಿಡ ನೆಡುವ ಮಾಡ್ನೂಲ್‌ಗ‌ಳಾಗಿ ಪರಿವರ್ತಿಸುವ ವಿನೂತನ ಹೆಜ್ಜೆಯನ್ನು ಇಡುತ್ತಿವೆ.

ಈ ಹಿಂದೆ ಬಳಸುತ್ತಿದ್ದ ಕಾಂಕ್ರೀಟ್‌ ಮತ್ತು ಲೋಹದ ತಡೆಗೋಡೆಗಳ ಬದಲಿಗೆ ಈಗ ಪರಿಸರ ಸ್ನೇಹಿ ಪ್ಲಾಸ್ಟಿಕ್‌ ರಚನೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.

ಇವೆ ಬಹುಪಯೋಗಗಳು!

*ಪ್ಲಾಸ್ಟಿಕ್‌ ನಿರ್ವಹಣೆ: ಎಸೆಯಲ್ಪಡುತ್ತಿದ್ದ ಅಥವಾ ಸುಡಲ್ಪಡುತ್ತಿದ್ದ ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಎರಡನೇ ಜೀವ ಸಿಗುತ್ತಿದ್ದು, ಇದು ಲ್ಯಾಂಡ್‌ ಫಿಲ್‌ಗ‌ಳನ್ನು ಸೇರುವುದನ್ನು ತಪ್ಪಿಸುತ್ತದೆ.

*ರಕ್ಷಣೆ ಮತ್ತು ಸುರಕ್ಷೆ: ಈ ದೃಢವಾದ ಪ್ಲಾಸ್ಟಿಕ್‌ ತಡೆಗೋಡೆಗಳು ಸೈಕಲ್‌ ಸವಾರರು ಮತ್ತು ಪಾದಚಾರಿಗಳ ಮಾರ್ಗಗಳನ್ನು ವಾಹನಗಳ ಮಾರ್ಗದಿಂದ ಪ್ರತ್ಯೇಕಿಸಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುತ್ತವೆ.

* ಸೌಂದರ್ಯಕ್ಕೂ ಸಹಕಾರಿ: ರಸ್ತೆಬದಿಯಲ್ಲಿ ಗಿಡ-ಮರಗಳು ಮತ್ತು ಹೂವುಗಳನ್ನು ಬೆಳೆಸಲು ಇವು ನೆರವಾಗುತ್ತಿದ್ದು, ನಗರದ ಸೌಂದರ್ಯ ಮತ್ತು ಜೀವವೈವಿಧ್ಯತೆಯನ್ನು ಹೆಚ್ಚಿಸುತ್ತವೆ.

*ಸುದೀರ್ಘ‌ ಬಾಳಿಕೆ: ಪ್ಲಾಸ್ಟಿಕ್‌ನಿಂದ ಮಾಡಲಾದ ಈ ತಡೆಗೋಡೆಗಳು ಹವಾಮಾನ ಬದಲಾವಣೆ ಹಾಗೂ ತುಕ್ಕು ನಿರೋಧಕ ಸಾಮರ್ಥ್ಯವನ್ನು ಹೊಂದಿದ್ದು ದೀರ್ಘ‌ಕಾಲ ಬಾಳಿಕೆ ಬರುತ್ತವೆ.

ಬಿಂದು ಅಲ್ಲ… ಸಿಂಧು: ಅಂಗಳ ತೊಳೆಯದಿರೋಣ, ಗುಡಿಸೋಣ !

ಹೆಚ್ಚಾಗಿ ನಗರದಲ್ಲಿದ್ದ ಪದ್ಧತಿ ಈಗ ಊರಿಗೂ ಬರುತ್ತಿದೆ. ಅದೆಂದರೆ ನೀರಿನ ಪೈಪಿನಲ್ಲಿ ಅಂಗಳವನ್ನು ಗುಡಿಸುವುದು, ತೊಳೆಯುವುದು. ಕಸಬರಿಕೆಯಲ್ಲಿ ಗುಡಿಸುವ ಪದ್ಧತಿ ಬಿಟ್ಟು, ಪಂಪ್‌ ಚಾಲೂ ಮಾಡಿ ಪೈಪಿನಲ್ಲಿ ರಭಸದಿಂದ ನುಗ್ಗುವ ನೀರಿನಿಂದ ಅಂಗಳ ತೊಳೆಯುತ್ತೇವೆ. ಕೇಳಿದರೆ, ಧೂಳೆಲ್ಲಾ ಸ್ವಚ್ಛವಾಗುತ್ತದೆ ಎನ್ನುತ್ತಾರೆ.

ಇನ್ನು ಕೆಲವರು, ನೀರು ಹಾಳಾಗೋಲ್ಲ, ನೋಡಿ ಗಿಡದ ಬುಡಕ್ಕೆ ಹೋಗುತ್ತದೆ ಎನ್ನುತ್ತಾರೆ. ವಿಚಿತ್ರವೆಂದರೆ ಈ ಕೆಲಸದಲ್ಲಿ ನೀರಷ್ಟೇ ಹಾಳಾಗೋಲ್ಲ, ವಿದ್ಯುತ್‌ ಸಹ. ವಿದ್ಯುತ್‌ ಯೂನಿಟ್‌ ಕಥೆ ಆಮೇಲೆ ನೋಡೋಣ, ನೀರೆಷ್ಟು ಖರ್ಚಾಗುತ್ತೆ ಗೊತ್ತಾ? ಒಂದು ನಿಮಿಷಕ್ಕೆ ಹೀಗೇ ನೋಡುತ್ತಿದ್ದಂತೆ ಕನಿಷ್ಠ 38 ಲೀಟರ್‌ನೀರು ಹರಿದು ಹೋಗುತ್ತದೆ. ಇನ್ನು ಉಳಿದದ್ದು ಎಷ್ಟು ಹೊತ್ತು ನೀವು ಅಂಗಳ ತೊಳೆಯುತ್ತೀರಿ ಎನ್ನುವುದಕ್ಕೆ ಲೆಕ್ಕ ಹಾಕಿಕೊಂಡರೆ ಆಯಿತು.

Dailyhunt
Disclaimer: This content has not been generated, created or edited by Dailyhunt. Publisher: Udayavani