ಗಾಜಾ: ಇಸ್ರೇಲ್ ಹಮಾಸ್ ನಡುವಿನ ಸಂಘರ್ಷ ಆರಂಭವಾಗಿ ಸುಮಾರು 3 ವರ್ಷಗಳಾಗಿದ್ದು, ಈವರೆಗೆ 74,016 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ.
ಜತೆಗೆ ಸಂಘರ್ಷದಲ್ಲಿ 1,75,068 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
2023ರ ಅ.7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಆರಂಭವಾದ ಸಂಘರ್ಷಕ್ಕೆ ಕಳೆದ ವರ್ಷ ಅ.10ರಂದು ಕದನ ವಿರಾಮ ಘೋಷಣೆಯಾಗಿದೆ. ಕದನ ವಿರಾಮದ ಬಳಿಕವೇ 1,145 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ ಎಂದು ಗಾಜಾ ಹೇಳಿದೆ.

