Dailyhunt
ಗಗನಯಾತ್ರಿಗಳ ಸಾಮರ್ಥ್ಯ ಅಧ್ಯಯನಕ್ಕೆ "ಮಿಶನ್‌ ಮಿತ್ರ'

ಗಗನಯಾತ್ರಿಗಳ ಸಾಮರ್ಥ್ಯ ಅಧ್ಯಯನಕ್ಕೆ "ಮಿಶನ್‌ ಮಿತ್ರ'

ವದೆಹಲಿ: ಗಗನಯಾನಕ್ಕಾಗಿ ಗಗನಯಾತ್ರಿಗಳ ಶಾರೀರಿಕ, ಮಾನಸಿಕ ಕ್ಷಮತೆ ಅರಿಯಲು ಲಡಾಖ್‌ನ ಲೇಹ್‌ನಲ್ಲಿ ಹೊಸ ಯೋಜನೆಯನ್ನು ಇಸ್ರೋ ಕೈಗೆತ್ತಿಕೊಂಡಿದೆ. ಕಡಿಮೆ ಆಮ್ಲಜನಕ, ಕಡಿಮೆ ಉಷ್ಣತೆಯ ಪ್ರದೇಶಕ್ಕೆ ಗಗನಯಾತ್ರಿಗಳು ಹೊಂದಿಕೊಳ್ಳುವುದಕ್ಕೆ ಸಹಾಯ ಮಾಡಲು ಈ ಯೋಜನೆ ನೆರವಾಗಲಿದೆ ಎಂದು ಇಸ್ರೋ ತಿಳಿಸಿದೆ.

ಭಾರತದ ದೀರ್ಘ‌ಕಾಲದ ಬಾಹ್ಯಾಕಾಶ ಯೋಜನೆ ಗಮನದಲ್ಲಿರಿಸಿ ಮಿಶ ನ್‌ಮಿತ್ರ (ಮ್ಯಾಪಿಂಗ್‌ ಆಫ್‌ ಇಂಟರ್‌ ಆಪರೇಬಲ್‌ ಟ್ರೆ„ಟ್ಸ್‌ ಆಯಂಡ್‌ ರೆಸ್ಪಾನ್ಸ್‌ ಅಸಸ್‌ಮೆಂಟ್‌) ಹೆಸರಿನಲ್ಲಿ 3500ಮೀ. ಎತ್ತರದ ಪ್ರದೇಶದಲ್ಲಿ ಯೋಜನೆ ಆರಂಭಿಸಲಾಗಿದೆ. ಈ ಪ್ರದೇಶ ಕಡಿಮೆ ಆಮ್ಲಜನಕ, ಉಷ್ಣತೆ ಹೊಂದಿದ್ದು, ಬಹುತೇಕ ಬಾಹ್ಯಾಕಾಶವನ್ನು ಹೋಲುವುದ ರಿಂದ ಇಲ್ಲಿಯೇಆರಂಭಿಸಲಾಗಿದೆ.

ಗಗನಯಾತ್ರಿಗಳು ಮತ್ತು ಭೂಮಿಯಲ್ಲಿರುವ ನಿಯಂತ್ರಣ ಕೊಠಡಿಯ ನಡುವಿನ ಸಮನ್ವಯ, ಒತ್ತಡದ ಪರಿಸ್ಥಿತಿಗಳಲ್ಲಿ ನಿರ್ಧಾರ ಕೈಗೊಳ್ಳುವ ಕ್ಷಮತೆ, ಪರಿಸ್ಥಿತಿಗೆ ಹೊಂದಿಕೊಳ್ಳುವುದು, ಮಾನಸಿಕ ಸ್ಥಿತಿಸ್ಥಾಪಕತ್ವವನ್ನು ಸಾಧಿಸುವುದಕ್ಕಾಗಿ ಯೋಜನೆ ಆರಂಭಿಸಲಾಗಿದೆ. ಭಾರತವು ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ ಮಾಡುವ ಯೋಜನೆಯನ್ನು ಈಗಾಗಲೇ ಆರಂಭಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani