ಕುಶಾಲನಗರ: ಇತ್ತೀಚೆಗೆ ಮುಖ್ಯಮಂತ್ರಿಗಳು ಮಡಿಕೇರಿ ದಸರಾ ಆಚರಣೆಗೆ ಅನುದಾನ ಘೋಷಿಸಿದ ಬೆನ್ನಲ್ಲೇ ಅ. 17ರಂದು ನಡೆಯುವ ಪವಿತ್ರ ಕಾವೇರಿ ತೀರ್ಥೋದ್ಭವ ಆಚರಣೆಗೆ ಕಾವೇರಿ ನೀರಾವರಿ ನಿಗಮದ ಮೂಲಕ 2 ಕೋಟಿ ರೂ.ಗಳ ಅನುದಾನವನ್ನು ಸಿಎಂ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ಕಳೆದ ಬಾರಿ ಗೋಣಿಕೊಪ್ಪ ದಸರಾ ಉತ್ಸವಕ್ಕೆ 75 ಲಕ್ಷ ರೂ.ಗಳ ಅನುದಾನ ನೀಡಿದ್ದು, ಈ ಬಾರಿ ಹೆಚ್ಚುವರಿಯಾಗಿ 25 ಲಕ್ಷ ರೂ.ಗಳ ಅನುದಾನ ಘೋಷಿಸಿ ಆದೇಶಿಸಿದ್ದಾರೆ.
ವಿರಾಜಪೇಟೆ: ಅಸ್ಸಾಂ ಕಾರ್ಮಿಕರ ತಪಾಸಣೆ
ವಿರಾಜಪೇಟೆ: ವಿರಾಜಪೇಟೆಯ ಪಟ್ಟಣದ ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸರು ಅಸ್ಸಾಂ ಕಾರ್ಮಿಕರನ್ನು ತಪಾಸಣೆಗೊಳಪಡಿಸಿದರು.
ಮಾರುಕಟ್ಟೆ, ಬಸ್ ನಿಲ್ದಾಣ ಹಾಗೂ ಮೀನು ಮಾರುಕಟ್ಟೆ ಸುತ್ತಮುತ್ತ ಅಸ್ಸಾಂ ಮೂಲದ ಕಾರ್ಮಿಕರ ಬ್ಯಾಗ್‌ಗಳು ಹಾಗೂ ಅವರ ಬಳಿ ಇದ್ದ ವೈಯಕ್ತಿಕ ವಸ್ತುಗಳನ್ನು ಪೊಲೀಸರು ಪರಿಶೀಲಿಸಿ ಅವರ ವಿಳಾಸ ಸೇರಿದಂತೆ ಅಗತ್ಯ ಮಾಹಿತಿಯನ್ನು ಪರಿಶೀಲನೆ ಮಾಡಿದರು. ಇತ್ತೀಚೆಗೆ ಹಲವು ಪ್ರಕರಣಗಳಲ್ಲಿ ಅಸ್ಸಾಂ ಮೂಲದವರು ಪಾಲ್ಗೊಂಡಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

