ದೇವನಹಳ್ಳಿ: ಕೊರೊನಾ ತಡೆಗಟ್ಟಲುಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು.ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಲಸಿಕೆಅಭಾವ ತಲೆದೂರಿದ್ದು, ಶೇ.50ರಷ್ಟು ಮಾತ್ರಲಸಿಕೆ ಹಾಕಲಾಗಿದೆ ಎಂದು ಆಲೂರುದುದ್ದನಹಳ್ಳಿ ಗ್ರಾಪಂ ಅಧ್ಯಕ್ಷೆ ಗೌರಮ್ಮ ರಾಮಣ್ಣತಿಳಿಸಿದರು.
ತಾಲೂಕಿನ ದಿನ್ನೂರು ಗ್ರಾಮದಲ್ಲಿ ನಡೆದಕೋವಿಡ್ ಲಸಿಕೆ ಅಭಿಯಾನದಲ್ಲಿ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಶೇ.50ರಷ್ಟುಜನರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ.ಯಾವುದೇ ಪಾಸಿಟೀವ್ ಪ್ರಕರಣಗಳು ಇಲ್ಲ.ವ್ಯಾಕ್ಸಿನೇಷನ್ ಸಮಸ್ಯೆ ಹೆಚ್ಚು ಇದೆ. ಆದಷ್ಟುವ್ಯಾಕ್ಸಿನ್ ಸರಿದೂಗಿಸಲು ಆರೋಗ್ಯ ಇಲಾಖೆಮುಂದಾಗಬೇಕು. ಕೊರೊನಾ ಬಗ್ಗೆಯಾರೂ ನಿರ್ಲಕ್ಷ್ಯ ಮಾಡಬೇಡಿ ಎಂದುಹೇಳಿದರು.
ಕುಂದಾಣ ವಿಎಸ್‌ಎಸ್‌ಎನ್ ಅಧ್ಯಕ್ಷದಿನ್ನೂರು ರಾಮಣ್ಣ ಮಾತನಾಡಿ, ಸುಣಘಟ್ಟ,ಬನ್ನಿಮಂಗಲ, ಆಲೂರು, ಬೀರಸಂದ್ರ ಗ್ರಾಮಗ Ù ಲ್ಲಿ ಕೋವಿಡ್ ಲಸಿಕೆಯ ಅಭಾವವಿದೆ.ಈಗಾಗಲೇ ಕಡಿಮೆ ಜನಸಂಖ್ಯೆಯಗ್ರಾಮಗಳಲ್ಲಿ ಲಸಿಕೆ ಹಾಕಲಾಗಿದೆ.
ಕೋವಿಡ್ ಕುರಿತ ಎಲ್ಲಾ ಲೇಟೆಸ್ಟ್ ಅಪ್‌ಡೇಟ್ಸ್ ಓದಿ
ಹೊಸದಾಗಿಲಸಿಕೆ ಹಾಕಿಸಿಕೊಳ್ಳಲು ಬರುತ್ತಿದ್ದು, ಲಸಿಕೆಯಪ್ರಮಾಣದಲ್ಲಿ ಹಂಚಿಕೆ ಮಾಡುವ ಕಾರ್ಯಮಾಡಲಾಗುತ್ತಿದೆ ಎಂದು ಹೇಳಿದರು.ಆಲೂರು ದುದ್ದನಹಳ್ಳಿ ಗ್ರಾಪಂಉಪಾಧ್ಯಕ್ಷೆ ಕಾಂತ ಮುನಿರಾಜು ಮತ್ತುಸದಸ್ಯರು, ಮುಖಂಡರು, ಆರೋಗ್ಯಇಲಾಖೆ ಸಿಬ್ಬಂದಿ ಇದ್ದರು.

