ಶಿವಮೊಗ್ಗ: ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಚರ್ಚ್ ಆವರಣದಲ್ಲಿ ಹೆಜ್ಜೇನು ದಾಳಿ ಮಾಡಿದ ಪರಿಣಾಮ ನೂರಾರು ಭಕ್ತರು ಗಾಯಗೊಂಡಿರುವ ಘಟನೆ ನಡೆದಿದೆ.
ಶುಕ್ರವಾರ ಗುಡ್ ಫ್ರೈಡೇ ಪರಿಣಾಮ ಶಿವಮೊಗ್ಗ ಸಕ್ರೇಡ್ ಹಾರ್ಟ್ ಚರ್ಚ್‌ನಲ್ಲಿ ಶಿಲುಬೆ ಹಮ್ಮಿಕೊಳ್ಳಲಾಗಿತ್ತು ಈ ವೇಳೆ ಸಾವಿರಾರು ಭಕ್ತರು ಚರ್ಚ್‌ನ ಆವರಣದಲ್ಲಿದ್ದರು.
ಈ ವೇಳೆ ಏಕಾಏಕಿ ಹೆಜ್ಜೇನು ದಾಳಿ ನಡೆದಿದೆ. ನೂರಾರು ಜನರ ಮೇಲೆ ಹೆಜ್ಜೇನು ದಾಳಿ ಮಾಡಿದ್ದರಿಂದ ಭಯಭೀತರಾಗಿ ಚರ್ಚ್‌ನ ಒಳಗೆ ಹೋಗಿ ಬಾಗಿಲು ಹಾಕಿಕೊಂಡರು. ಅಷ್ಟರಲ್ಲಾಗಲೇ ನೂರಾರು ಜನರಿಗೆ ಹೆಜ್ಜೇನು ದಾಳಿ ಮಾಡಿವೆ. ಹೆಜ್ಜೇನು ದಾಳಿಗೆ ಒಳಗಾದವರನ್ನು ಆಂಬ್ಯುಲೆನ್ಸ್ ಮೂಲಕ ಚರ್ಚ್‌ನ ಸಮೀಪವಿರುವ ಅಶೋಕ ಸಂಜೀವಿನಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು. ಚರ್ಚ್‌ನ ಫಾದರ್‌ಗೂ ಹೆಜ್ಜೇನು ದಾಳಿ ನಡೆಸಿದ್ದು ತೀವ್ರವಾಗಿ ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಗೆ ಹಾಕುವ ಮೂಲಕ ಹೆಜ್ಜೇನು ಓಡಿಸುವ ಪ್ರಯತ್ನ ಮಾಡಲಾಯಿತು. ಚರ್ಚ್‌ನ ಫಾದರ್‌ಗೂ ಹೆಜ್ಜೇನು ದಾಳಿ ನಡೆಸಿದ್ದು ತೀವ್ರವಾಗಿ ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಚರ್ಚ್‌ನ ಆವರಣದಲ್ಲಿರುವ ಮರಗಳಲ್ಲಿ ಹೆಜ್ಜೇನು ಗೂಡು ಕಟ್ಟಿದ್ದವು. ಆದರೆ ಹಬ್ಬದ ಹಿನ್ನೆಲೆಯಲ್ಲಿ ಗೂಡುಗಳನ್ನು ತೆರವು ಮಾಡಲಾಗಿತ್ತು ಎನ್ನಲಾಗಿದೆ. ಹೆಜ್ಜೆನು ದಾಳಿಯ ಹಿನ್ನೆಲೆಯಲ್ಲಿ ಶಿಲುಬೆ ಆದಿ ಅರ್ಧಕ್ಕೆ ನಿಂತಿತು. ಹೆಜ್ಜೇನು ದಾಳಿಗೆ ಒಳಗಾದರೂ ಸಹ ಭಕ್ತರು ಪ್ರಾರ್ಥನೆಯನ್ನು ಪೂರ್ಣಗೊಳಿಸಿದರು.

