Dailyhunt Logo
  • Light mode
    Follow system
    Dark mode
    • Play Story
    • App Story
ಗುಂಪು ಎಸ್‌ಐಆರ್‌! ರಾಜ್ಯದ‌ ಹಲವೆಡೆ ಸಾಮೂಹಿಕ ಪ್ರಕ್ರಿಯೆ ಪತ್ತೆ

ಗುಂಪು ಎಸ್‌ಐಆರ್‌! ರಾಜ್ಯದ‌ ಹಲವೆಡೆ ಸಾಮೂಹಿಕ ಪ್ರಕ್ರಿಯೆ ಪತ್ತೆ

ಬೆಂಗಳೂರು / ಹುಬ್ಬಳ್ಳಿ : ಮತ ದಾರ ಪಟ್ಟಿಯ ಸಮಗ್ರ ಪರಿಷ್ಕರಣೆ ( ಎಸ್ ‌ ಐಆರ್ ‌) ಕಾರ್ಯ ಮನೆಮನೆಗೆ ತೆರಳಿ ನಡೆಸ ಬೇಕೆಂಬ ಚುನಾವಣ ಆಯೋಗದ ನಿರ್ದೇ ಶನವನ್ನು ಕೆಲವು ಬಿಎಲ್ ‌ ಒ ( ಮತಗಟ್ಟೆ ಅಧಿಕಾರಿಗಳು ) ಗಳು ನಿರ್ಲಕ್ಷಿಸಿದ್ದು , ತಮ್ಮ ಅಗತ್ಯಕ್ಕನುಗುಣವಾಗಿ ದೇವಸ್ಥಾನ , ಮಸೀದಿ , ಸಮುದಾಯ ಭವನ , ಅಂಗನ ವಾಡಿ ಕೇಂದ್ರಗಳಲ್ಲಿ ಸಾಮೂಹಿಕವಾಗಿ ಎಸ್ ‌ ಐಆರ್ ‌ ಪ್ರಕ್ರಿಯೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ . ಇದು ರಾಜಕೀಯ ಪಕ್ಷಗಳ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿದೆ .

ಮನೆ ಮನೆಗೆ ತೆರಳಿ ಎನ್ಯುಮರೇಷನ್ ‌ ಫಾರಂ ವಿತರಿಸಿ , ಅಗತ್ಯ ಮಾಹಿತಿ ಪಡೆಯ ಬೇಕಿದ್ದ ಬಿಎಲ್ ‌ ಒಗಳು ಆಯಾ ವಾರ್ಡಿನ ದೇವಾಲಯ , ಮಸೀದಿ , ಸಮುದಾಯ ಭವನ , ಅಂಗನವಾಡಿ ಮುಂತಾದೆಡೆ ಕುಳಿತು ಮತದಾರರನ್ನು ಕರೆಸಿಕೊಂಡು ಫಾರಂ ವಿತರಿಸುತ್ತಿದ್ದಾರೆ .

ಗುರುವಾರವಷ್ಟೇ ಬಿಎಲ್ ‌ ಒಗಳು ರಾಮನಗರ ಪಟ್ಟಣದ ಕೆಲವು ವಾರ್ಡ್ ‌ ಗಳಲ್ಲಿ ಮನೆ ಮನೆ ಪರಿಶೀಲಿಸದೆ , ಸ್ಥಳೀಯ ಸಮುದಾಯ ಭವನದಲ್ಲಿ ಕುಳಿತು ಎಸ್ ‌ ಐಆರ್ ‌ ಪ್ರಕ್ರಿಯೆ ನಡೆಸಿದ್ದು ಬೆಳಕಿಗೆ ಬಂದಿತ್ತು . ಇದರ ಬೆನ್ನಲ್ಲೇ , ಶುಕ್ರವಾರವೂ ಕೋಲಾರ , ತುಮಕೂರು , ಹುಬ್ಬಳ್ಳಿ , ವಿಜಯಪುರ ಜಿಲ್ಲೆಯ ಇಂಡಿ ಸಹಿತ ಹಲವೆಡೆ ಇಂಥದ್ದೇ ಆರೋಪಗಳು ಕೇಳಿಬಂದಿದೆ .

ಹುಬ್ಬಳ್ಳಿಯ 51 ನೇ ವಾರ್ಡ್ ‌ ನ ಪ್ರಿಯದರ್ಶಿನಿ ಕಾಲನಿಯ ಚವ್ಹಾಣ ಪ್ಲಾಟ್ ‌ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಮತದಾರರ ವಿಶೇಷ ಪರಿಷ್ಕರಣೆ ಕಾರ್ಯಕ್ರಮ ಶುಕ್ರವಾರ ನಡೆದಿದೆ . ಕೋಲಾರ ನಗರದ ವಿವಿಧ ವಾರ್ಡುಗಳಲ್ಲಿ ದೇವಾಲಯ , ಮಸೀದಿ , ಸಮುದಾಯ ಭವನ , ಅರಳೀಕಟ್ಟೆಯಂತಹ ಪ್ರದೇಶಗಳಲ್ಲಿ ಕುಳಿತು ಸ್ಥಳೀಯ ರಾಜಕಾರಣಿಗಳ ಮೂಲಕ ಮತದಾರರನ್ನು ಕರೆಸಿಕೊಂಡು ಎನ್ಯುಮರೇಷನ್ ‌ ಫಾರಂ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ . ಕರ್ತವ್ಯ ಲೋಪ ಎಸಗಿದವರ ವಿರುದ್ಧ ಶಿಸ್ತು ಕ್ರಮ ಜರಗಿಸಲಾಗುವುದು ಎಂದು ಕೋಲಾರ ಜಿಲ್ಲಾಧಿಕಾರಿ ಡಾ | ಎಂ . ಆರ್ ‌. ರವಿ ಎಚ್ಚರಿಕೆ ನೀಡಿದ್ದಾರೆ .

ಸಾಮೂಹಿಕ ಫಾರಂ ವಿತರಣೆ ಆರೋಪ

ಮೈಸೂರು ನಗರದ ನರಸಿಂಹ ರಾಜ ಕ್ಷೇತ್ರದಲ್ಲಿ ಎನ್ಯುಮರೇಷನ್ ‌ ಫಾರಂಗಳನ್ನು ಸಾಮೂಹಿಕವಾಗಿ ಹಂಚಿ , ಭರ್ತಿ ಮಾಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ . ಎನ್ ‌. ಆರ್ ‌. ಕ್ಷೇತ್ರದಲ್ಲಿ ಶುಕ್ರವಾರ ಎಸ್ ‌ ಐಆರ್ ‌ ಪ್ರಕ್ರಿಯೆ ವೇಳೆ ಒಂದು ಪಕ್ಷದ ಕಾರ್ಯಕರ್ತರು ಗೂಂಡಾಗಳಂತೆ ವರ್ತಿಸಿ , ಅಧಿಕಾರಿಗಳಿಂದ ಫಾರಂಗಳನ್ನು ಕಸಿದು ಸಿಕ್ಕ ಸಿಕ್ಕವರಿಂದ ಭರ್ತಿ ಮಾಡಿಸಿ ವಾಪಸ್ ‌ ನೀಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ .

ತುಮಕೂರು ಜಿಲ್ಲೆಯ ವಿವಿಧೆಡೆಯೂ ಸಾಮೂಹಿಕ ಎಸ್ ‌ ಐಆರ್ ‌ ಆರೋಪ ಕೇಳಿಬಂದಿದೆ .

ಎಲ್ಲೆಲ್ಲಿ ಸಾಮೂಹಿಕ ಎಸ್ ‌ ಐಆರ್ ‌?

ರಾಮನಗರದ ಸಮುದಾಯ ಭವನ , ಕೋಲಾರದ ಕುರುಬರ ಪೇಟೆ , ಹುಬ್ಬಳ್ಳಿಯ ತುಳಜಾಭವಾನಿ ದೇವಸ್ಥಾನ ದಲ್ಲಿ ಸಾಮೂಹಿಕ ಎಸ್ ‌ ಐಆರ್ ‌, ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಸಾಮೂಹಿಕ ಅರ್ಜಿ ಹಂಚಿಕೆ , ತುಮಕೂರು , ಕುಣಿಗಲ್ ‌, ವಿಜಯಪುರದ ಇಂಡಿಯಲ್ಲಿ ಸಾಮೂಹಿಕ ಅರ್ಜಿ ವಿತರಣೆ ಆರೋಪ ಕೇಳಿ ಬಂದಿದೆ .

Dailyhunt
Disclaimer: This content has not been generated, created or edited by Dailyhunt. Publisher: Udayavani