Dailyhunt Logo
  • Light mode
    Follow system
    Dark mode
    • Play Story
    • App Story
ಹಾಕಿ ವಿಶ್ವಕಪ್‌: ವನಿತೆಯರಿಗೆ 5ನೇ ಸ್ಥಾನ

ಹಾಕಿ ವಿಶ್ವಕಪ್‌: ವನಿತೆಯರಿಗೆ 5ನೇ ಸ್ಥಾನ

ಯಮ್ಸ್‌ಸ್ಟೆಲ್ವಿàನ್‌ (ನೆದರ್ಲೆಂಡ್ಸ್‌): ಹಾಕಿ ವಿಶ್ವಕಪ್‌ ಪಂದ್ಯಾವಳಿಯ ವನಿತಾ ವಿಭಾಗದ 5ನೇ ಸ್ಥಾನದ ಸ್ಪರ್ಧೆಯಲ್ಲಿ ಬಲಿಷ್ಠ ಜರ್ಮನಿಯನ್ನು 3-1 ಅಂತರದಿಂದ ಮಣಿಸಿರುವ ಭಾರತ 5ನೇ ಸ್ಥಾನದೊಂದಿಗೆ ಸ್ಪರ್ಧೆಯನ್ನು ಕೊನೆಗೊಳಿಸಿದೆ.

ಗುರುವಾರದ ಪಂದ್ಯದಲ್ಲಿ ಭಾರತ ಪರ 43ನೇ ನಿಮಿಷದಲ್ಲಿ ಇಶಿಕಾ, 44 ಮತ್ತು 47ನೇ ನಿಮಿಷದಲ್ಲಿ ನವನೀತ್‌ ಕೌರ್‌ ಗೋಲ್‌ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.

59ನೇ ನಿಮಿಷದಲ್ಲಿ ಜರ್ಮನಿ ಪರ ಲಿಂಗ್‌ ಕ್ರಿಂಗ್ಸ್‌ ಗೋಲ್‌ ಬಾರಿಸಿದರಾದರೂ ಮುನ್ನಡೆಯಲ್ಲಿದ್ದ ಭಾರತ ಪಂದ್ಯವನ್ನು ಗೆದ್ದಿತು.

ಇಂದು 7ನೇ ಸ್ಥಾನಕ್ಕೆ ಭಾರತ-ಬೆಲ್ಜಿಯಂ ಸ್ಪರ್ಧೆ:

ವಾವ್ರೇಯಲ್ಲಿ ಶುಕ್ರವಾರ ಪುರುಷರ ವಿಭಾಗದ 7ನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಭಾರತ ಮತ್ತು ಬೆಲ್ಜಿಯಂ ಕಣಕ್ಕಿಳಿಯಲಿವೆ.

Dailyhunt
Disclaimer: This content has not been generated, created or edited by Dailyhunt. Publisher: Udayavani