ಹೈದರಾಬಾದ್ : ಇಲ್ಲಿನ ಸೈಬರಾಬಾದ್ ಬಳಿಯ ರಾಯದುರ್ಗ ಪ್ರಾಂತ್ಯದಲ್ಲಿ 5.38 ಎಕರೆ ವ್ಯಾಪ್ತಿಯಲ್ಲಿನ ಜಾಗವೊಂದು ತೆಲಂಗಾಣ ಕೈಗಾರಿಕಾ ಮೂಲಸೌಕರ್ಯ ನಿಗಮ ( ಟಿಜಿಐಐಸಿ ) ನಡೆಸಿದ ಹರಾಜಿನಲ್ಲಿ 1447 ಕೋಟಿ ರೂ . ಗಳಿಗೆ ಮಾರಾಟವಾಗುವ ಮೂಲಕ ಪ್ರಾಂತೀಯ ಮಟ್ಟದಲ್ಲಿ ಹೊಸ ದಾಖಲೆ ಬರೆದಿದೆ .
ಪ್ರತಿ ಎಕರೆಗೆ 269 ಕೋಟಿ ರೂ . ನಂತೆ ಹರಾಜಾಗಿರುವುದು ಇದು ಈ ಪ್ರಾಂತ್ಯದಲ್ಲಿ ಈವರೆಗಿನ ಗರಿಷ್ಠ ಎಂದು ಹೇಳಲಾಗಿದೆ . ಕಳೆದ ವಾರ , ಇದೇ ಪ್ರಾಂತ್ಯದಲ್ಲಿ 5.28 ಎಕರೆ ವಿಸ್ತೀರ್ಣದ ನಿವೇಶನವೊಂದು ಎಕರೆಗೆ 264 ಕೋಟಿ ರೂ . ಗಳಂತೆ ಹರಾಜಾಗಿದ್ದು ಏಳು ದಿನಗಳಲ್ಲೇ ಎಕರೆಗೆ 5 ಕೋಟಿ ರೂ . ಗಳಿಗೆ ಏರಿದೆ .

