ಕೋಲ್ಕತಾ: ಇಲ್ಲಿ ನಡೆದ ಟಿಎಂಸಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಆರೋಪದಡಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಕೋಲ್ಕತಾ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ಟಿಎಂಸಿ ವಿದ್ಯಾರ್ಥಿ ಘಟಕವು ಶುಕ್ರವಾರ ಕೋಲ್ಕತಾದ ಕ್ಯಾಥಡ್ರೆಲ್ ರಸ್ತೆಯಲ್ಲಿ ಕಾರ್ಯಕ್ರಮ ನಡೆಸಲು ಹೈಕೋರ್ಟ್ ಅನುಮತಿ ನೀಡಿದ್ದು, ರಸ್ತೆಯ 1 ಭಾಗವನ್ನು ತೆರೆಯುವಂತೆ ಷರತ್ತು ವಿಧಿಸಿತ್ತು.
ಆದರೆ ಕಾರ್ಯಕ್ರಮ ಆಯೋಜಕರು ಈ ಷರತ್ತನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅದಲ್ಲದೇ ಹೈಕೋರ್ಟ್ ನೀಡಿದ್ದ ಸಮಯ ಮಿತಿಯನ್ನು ಮೀರಿ ಕಾರ್ಯಕ್ರಮ ನಡೆದಿದೆ ಎಂದು ಸಹ ಆರೋಪಿಸಲಾಗಿದ್ದು, ಪೊಲೀಸರು ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದಾರೆ.

