ಮಣಿಪಾಲ: ಬ್ರಹ್ಮಾವರ ತಾಲೂಕು ಹಂಗಾರಕಟ್ಟೆ ಮೀನು ಗಾರಿಕ ಕಿರು ಬಂದರು ಕಾಮಗಾರಿ ಅಭಿವೃದ್ಧಿಗೆ 78 ಕೋ. ರೂ. ಮಂಜೂರಾಗಿದ್ದು, ಮೂರು ವರ್ಷ ಕಳೆದರೂ ಬಂದರು ಕಾಮಗಾರಿ ಆರಂಭಿಸದಿರುವ ಬಗ್ಗೆ ಬಂದರು ಮತ್ತು ಮೀನುಗಾರಿಕೆಯ ಇಲಾಖೆ ಅಧಿಕಾರಿಗಳನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ತರಾಟೆಗೆ ತೆಗೆದುಕೊಂಡರು.
ಸಂಸದ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಪರಿಸರಇಲಾಖೆಯ ಕೇಂದ್ರ ಕಚೇರಿಯಲ್ಲಿ ಇದಕ್ಕೆ ಸಂಬಂಧಿಸಿದ ಕಡತ ಬಾಕಿ ಉಳಿದಿದ್ದು ಇಲಾಖಾನುಮತಿ ಸಿಗುತ್ತಲೇ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
ಈ ವೇಳೆ ಬೆಂಗಳೂರಿನ ಹಿರಿಯ ಅಧಿಕಾರಿಗಳ ಜತೆ ದೂರವಾಣಿ ಮೂಲಕ ಮಾತನಾಡಿದ ಸಂಸದರು, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಅನುಮತಿ ನೀಡಲು ಸಲಹೆ ನೀಡಿದರು.
ಕೋಡಿ ಕನ್ಯಾನದ ಕಿರು ಬಂದರಿನ ಹೂಳೆತ್ತುವ ಕಾಮಗಾರಿಗೆ 84 ಲಕ್ಷ ರೂ. ಮಂಜೂರಾಗಿದ್ದು, ಟೆಂಡರ್‌ಪ್ರಕ್ರಿಯೆ ಮುಗಿಯುತ್ತಲೇ ಕಾಮಗಾರಿ ಕೈಗೆತ್ತಿಕೊಳ್ಳುವುದೆಂದು ಅಧಿಕಾರಿಗಳು ತಿಳಿಸಿದರು.
ಮೀನುಗಾರಿಕೆ ಇಲಾಖೆಯ ಉಪನಿ ರ್ದೇಶಕ ಕುಮಾರಸ್ವಾಮಿ, ಬಂದರು ಇಲಾಖೆಯ ಉಪನಿರ್ದೇಶಕ ರಾಥೋಡ್, ಸಿಆರ್‌ಝಡ್‌ನ ಧೀರಜ್ ಉಪಸ್ಥಿತರಿದ್ದರು.

