ಚಂಡೀಗಢ: ಹರ್ಯಾಣದ ಹನ್ಸಿಯಲ್ಲಿನ ಜಿಮ್ ಮಾಲಿಕರೊಬ್ಬರ ಹತ್ಯೆ ಆರೋಪಿಗಳಿಬ್ಬರು ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಹರ್ಯಾಣದ ಬಹದ್ದೂರ್‌ಗಢದಲ್ಲಿ ಶನಿವಾರ ರಾತ್ರಿ ಪೊಲೀಸರು ಹಾಗೂ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್, ಹ್ಯಾರಿ ಬಾಕ್ಸರ್ ಗ್ಯಾಂಗ್‌ನ ಇಬ್ಬರು ಶೂಟರ್‌ಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.
ಈ ಕಾರ್ಯಾಚರಣೆಯನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಮತ್ತು ಹರ್ಯಾಣದ ವಿಶೇಷ ಕಾರ್ಯಪಡೆಯ ಜಂಟಿ ತಂಡವು ನಡೆಸಿದೆ. ಈ ವೇಳೆ ಹರ್ಯಾಣ ವಿಶೇಷ ಪಡೆಯ ಕಾನ್‌ಸ್ಟೇಬಲ್ ಒಬ್ಬರಿಗೆ ಗಾಯವಾಗಿದೆ.

