ತೀರ್ಥಹಳ್ಳಿ : ತಾಲೂಕಿನಲ್ಲಿ ಧಾರಾಕಾರ ಮಳೆ ಆಗುತ್ತಿದ್ದು ಅದರಲ್ಲೂ ಆಗುಂಬೆ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟುಬಿಡದೆ ಮಳೆ ಸುರಿಯುತ್ತದೆ.. ಈ ಭಾಗದಲ್ಲಿ ಕಳೆದೆರಡು ದಿನಗಳಿಂದ ನೆಟ್ವರ್ಕ್ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಜನರು ಪರದಾಟ ನಡೆಸುವಂತಾಗಿದೆ..
ಈ ಮಧ್ಯೆ ತೀರ್ಥಹಳ್ಳಿ ಆಗುಂಬೆ ಮಾರ್ಗದ ಗೌರಿಹಕ್ಕಲು ಬಳಿ ರಸ್ತೆಗೆ ನೀರು ನುಗ್ಗಿದೆ. ಗದ್ದೆಯ ಮೂಲಕ ರಸ್ತೆಗೆ ನೀರು ನುಗ್ಗಿದ್ದು ವಾಹನ ಸಾವಾರರು ಪರದಾಟ ನಡೆಸುತ್ತಿದ್ದಾರೆ..
ಆಗುಂಬೆ ವ್ಯಾಪ್ತಿಯಲ್ಲಿ ಹಳ್ಳ ಕೊಳ್ಳಗಳಿಗೆ ಯಾರೂ ಕೂಡ ಇಳಿಯದಂತೆ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ..

