ಹೊಸದಿಲ್ಲಿ: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ವದಂತಿಗಳಿಗೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವ ಉದ್ದೇಶದಿಂದ ತಾವು ನಿವೃತ್ತಿಯಿಂದ ಹೊರಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಕ್ಲಾಸೆನ್, 2026ರ ಟಿ20 ವಿಶ್ವಕಪ್ ವೇಳೆ ತಂಡವನ್ನು ಮಿಸ್ ಮಾಡಿಕೊಳ್ಳುತ್ತಿರುವ ತುಡಿತ ಹೊಂದಿದ್ದರು.
"ಎರಡು ವಾರಗಳ ಕಾಲ ತಂಡಕ್ಕೆ ಮರಳುವ ಬಗ್ಗೆ ಯೋಚಿಸಿದ್ದೆ. ಆದರೆ, ಅಂತಿಮವಾಗಿ ಮರಳದಿರಲು ನಿರ್ಧರಿಸಿದೆ. ನನಗೆ ನನ್ನ ಕುಟುಂಬವೇ ಬಹಳ ಮುಖ್ಯ," ಎಂದು ಎಸ್‌ಆರ್‌ಎಚ್ ಸಹ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಜತೆಗಿನ ಸಂವಾದದಲ್ಲಿ ಕ್ಲಾಸೆನ್ ಹೇಳಿದ್ದಾರೆ.

