ವಿಜಯ್ ಕುಮಾರ್ ನಿರ್ದೇಶನದ ಸಿಟಿ ಲೈಟ್ಸ್ ಸಿನಿಮಾದ ನಾಲ್ಕನೇ ಹಾಡು ಬಿಡುಗಡೆಯಾಗಿದೆ.
"ಅವರಿವರ ಮಾತು ಕೇಳಿ ಪ್ರೀತಿ ಕಳೆದುಕೊಳ್ಳಬೇಡಿ.. ಪ್ರೀತಿ ಅಪರೂಪ ಅದನ್ನು ಕಳೆದುಕೊಳ್ಳಬೇಡಿ....ಇವನ ಕಂಡ್ರೆ ಅವಳು ಫಿದಾ.. ಇವಳಾ ಕಂಡ್ರೆ ಅವನು ಫಿದಾ..' ಎನ್ನುವ ಹಾಡು ಇದಾಗಿದ್ದು, ಈ ಹಾಡಿನಲ್ಲಿ ದೂರದ ಊರುಗಳಿಂದ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡ ಜೋಡಿಗಳ ಮೇಲೆ ಚಿತ್ರವಾಗಿದೆ.
ಚರಣ್ ರಾಜ್ ಸಂಗೀತ ಸಂಯೋಜನೆಯ ಮಾಡಿದ್ದು ನಾಗಾರ್ಜುನ್ ಶರ್ಮಾ ಸಾಹಿತ್ಯವಿದೆ, ಈ ಹಾಡನ್ನು ಅಂಥೋಣಿ ದಾಸ್ ಹಾಡಿದ್ದಾರೆ. ಚಿತ್ರ ಸೆಪ್ಟೆಂಬರ್ 18 ರಂದು ತೆರೆಗೆ ಬರುತ್ತಿದೆ.
ನಿರ್ದೇಶಕ ವಿಜಯ್ ಕುಮಾರ್ ಮಾತನಾಡಿ "ಯುವ ಕಲಾವಿದರು ಚಿತ್ರರಂಗವನ್ನು ಮುನ್ನೆಡೆಸುವರು. ನಿಮ್ಮ ಜೊತೆ ನಾವು ಬರುತ್ತಾ ಇದ್ದೇವೆ. ನಮ್ಮನ್ನು ಮುಂದಕ್ಕೆ ಕರೆದುಕೊಂಡು ಹೋಗಿ. ಹಾಡಿನಲ್ಲಿ ಬದುಕು ಕಟ್ಟಿಕೊಂಡ ಜೋಡಿಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ತಾಯಿ- ತಂದೆ ಕಣ್ಣಿಗೆ ಕಾಣುವ ದೇವರು. ಹೀಗಾಗಿಯೇ ಅಪ್ಪ- ಅಮ್ಮನ ಪೋಟೋ ಕೂಡ ಹಾಕಿದ್ದೇನೆ' ಎಂದರು. ಸಿನಿಮಾ ಮತ್ತು ಸಂಗೀತ ಎಂದೂ ಮೋಸ ಮಾಡಲ್ಲ. ಹೀಗಾಗಿ ಕಷ್ಟಪಟ್ಟು ಸಿನಿಮಾ ಮಾಡುತ್ತಾ ಇದ್ದೇನೆ.
ಬೆಂಗಳೂರಿಗೆ ಬಂದ ಜೋಡಿಗಳನ್ನು ಬಳಸಿಕೊಳ್ಳಲಾಗಿದೆ. ಅವರ ಜೀವನದ ಜೋಡಿಗಳನ್ನು ಹುಡುಕಿ ಹುಡುಕಿ ಪೋಟೋ ತೆಗೆಸಿಕೊಳ್ಳಲಾಗಿದೆ. ಈ ಹಾಡು ಸಿನಿಮಾದಲ್ಲಿ ಇರುವುದಿಲ್ಲ. ಯೂ ಟೂಬ್‌ನಲ್ಲಿ ಲಭ್ಯವಿರಲಿದೆ ಎಂದರು. ಹೆಣ್ಣು ಮಕ್ಕಳಿಗೆ ಗೌರವ ತರುವ ಸಿನಿಮಾ ಇದು ಎನ್ನಲು ಮರೆಯಲಿಲ್ಲ ವಿಜಯ್.
ಸತ್ಯವನ್ನು ಸತ್ಯವಾಗಿ ತೋರಿಸುವುದು ಸವಾಲಿನ ಕೆಲಸ ಇನ್ನು ಒಂದು ಹಾಡು ಬಾಕಿ ಇದೆ. ಚಿತ್ರಕ್ಕೆ ಎಲ್ಲರ ಸಹಕಾರ ಅಗತ್ಯ. ವಿನಯ್ ರಾಜ್ ಕುಮಾರ್ ಉತ್ತಮ ನಟ. ಅವರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ ಎಂದರು ವಿಜಯ್.
ನಟ ವಿನಯ್ ರಾಜ್ ಕುಮಾರ್ ಮಾತನಾಡಿ, ಹಾಡನ್ನು ಅಮ್ಮನಿಗೆ ಕೇಳಿಸಿದೆ. ಅವರು ಖುಷಿ ಪಟ್ಟರು. ಸಿಟಿ ಲೈಟ್ಸ್ ಚಿತ್ರದ ಹಾಡು ಪ್ರೀತಿ ಬಗ್ಗೆ ಮೂಡಿ ಬಂದಿದೆ. ಪ್ರತಿಯೊಂದು ಜೋಡಿಯೂ ಅವರದೇ ಪ್ರಚಂಚ ಸೃಷ್ಟಿ ಮಾಡಿಕೊಂಡಿದ್ದಾರೆ. ವಿಜಯ್ ಕುಮಾರ್ ಜೊತೆ ಕೆಲಸ ಮಾಡುವುದು ಅದ್ಭುತ ಅನುಭವ. ಪ್ರೀತಿಗೆ ಒಂದೇ ರೀತಿಯ ವಾಖ್ಯಾನ ಮಾಡಲು ಸಾಧ್ಯವಿಲ್ಲ ಎಂದರು.
ನಟಿ ಮೋನಿಷಾ ಮಾತನಾಡಿ ಪ್ರೀತಿಯ ಬಗ್ಗೆ ಹೇಳುವಷ್ಟು ತಿಳುವಳಿಕೆ ಇಲ್ಲ. ಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ ಎಲ್ಲರ ಸಹಕಾರವಿರಲಿ ಎಂದರು. ಗೀತ ರಚನೆಕಾರ ನಾಗಾರ್ಜುನ ಶರ್ಮಾ, ಸಂಗೀತ ನಿರ್ದೇಶಕ ಚರಣ್ ರಾಜ್, ಮಾಸ್ತಿ ಸಿನಿಮಾ ಕುರಿತಾಗಿ ಮಾತನಾಡಿದರು.

