Dailyhunt Logo
  • Light mode
    Follow system
    Dark mode
    • Play Story
    • App Story
ಹೊರ್ಮುಜ್ ಸಂಚಾರಕ್ಕೆ ಶುಲ್ಕ ಖಚಿತ, ಮಿತ್ರರಿಗೆ ರಿಯಾಯಿತಿ: ಇರಾನ್

ಹೊರ್ಮುಜ್ ಸಂಚಾರಕ್ಕೆ ಶುಲ್ಕ ಖಚಿತ, ಮಿತ್ರರಿಗೆ ರಿಯಾಯಿತಿ: ಇರಾನ್

ಟೆಹ್ರಾನ್‌: ಹೊರ್ಮುಜ್‌ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳಿಗೆ ಸೇವಾ ಶುಲ್ಕ ವಿಧಿಸಲು ಇರಾನ್‌ ಯೋಜಿಸುತ್ತಿದೆ ಎಂದು ಚೀನದಲ್ಲಿನ ಇರಾನ್‌ ರಾಯಭಾರಿ ಶನಿವಾರ ಹೇಳಿದ್ದಾರೆ.

ಜತೆಗೆ ಯುದ್ಧದ ವೇಳೆ ಇರಾನ್‌ಗೆ ಬೆಂಬಲ ನೀಡಿದ ದೇಶಗಳಿಗೆ ವಿಶೇಷ ರಿಯಾಯಿತಿ ನೀಡಲಾಗುವುದು ಎಂದೂ ತಿಳಿಸಿದ್ದಾರೆ.

ಈ ಸಂಬಂಧ ಒಮಾನ್‌ ಜತೆಗೆ ಇರಾನ್‌ ಮಾತುಕತೆ ನಡೆಸುತ್ತಿದ್ದು, ಅಲ್ಲಿನ ದಟ್ಟನೆ ನಿರ್ವಹಣೆಗಾಗಿ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದಿದ್ದಾರೆ.

ಹೊರ್ಮುಜ್‌ನಲ್ಲಿ ಇರಾನ್‌ ಶುಲ್ಕ ವಿಧಿಸುವುದಿಲ್ಲ ಎಂದು ಅಮೆರಿಕ ಹೇಳುತ್ತಿರುವ ನಡುವೆಯೇ ಇರಾನ್‌ ರಾಯಭಾರಿಯ ಈ ಹೇಳಿಕೆ ಹೊರಬಿದ್ದಿದೆ. ಇದೇ ವೇಳೆ, ಅಮೆರಿಕ ಇರಾನ್ ಮುಂದಿನ ಸುತ್ತಿನ ಮಾತುಕತೆ ಇಸ್ಲಾಮಾಬಾದ್‌ನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

Dailyhunt
Disclaimer: This content has not been generated, created or edited by Dailyhunt. Publisher: Udayavani