Dailyhunt Logo
  • Light mode
    Follow system
    Dark mode
    • Play Story
    • App Story
Hubballi: ಬರದ ನಡುವೆ 10 ಜಿಲ್ಲೆಯಲ್ಲಿ ಮಳೆಯ ಜೀವಕಳೆ

Hubballi: ಬರದ ನಡುವೆ 10 ಜಿಲ್ಲೆಯಲ್ಲಿ ಮಳೆಯ ಜೀವಕಳೆ

ಹುಬ್ಬಳ್ಳಿ: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು 10 ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಿದೆ. ಇದರಿಂದ ಒಣಗುತ್ತಿದ್ದ ಬೆಳೆಗಳಿಗೆ ಜೀವಕಳೆ ಬಂದಿದ್ದು ರೈತರ ತುಸು ನಿಟ್ಟುಸಿರುಬಿಡುವಂತಾಗಿದೆ. ನದಿಗಳ ನೀರಿನ ಮಟ್ಟ ಏರಿಕೆಯಾಗಿ, ಜಲಾಶಯಗಳಿಗೆ ಒಳ ಹರಿವು ಶುರುವಾಗಿದೆ.

ಬಹುತೇಕ ಕಡೆ ಬರದ ಭೀತಿ ಎದುರಾಗಿರುವ ನಡುವೆಯೇ ಅಲ್ಲಲ್ಲಿ ಭರವಸೆಯ ಜೀವಕಳೆ ಚಿಗುರೊಡೆದಿದೆ.

ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ರಾಜಾಪುರ ಬ್ಯಾರೇಜ್‌ನಿಂದ ನೀರು ಬಿಡಲಾಗುತ್ತಿದ್ದು ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳಿಗೆ ಜೀವಕಳೆ ಬಂದಿದೆ. ಖಾನಾಪುರ ಭಾಗದಲ್ಲೂ ಧಾರಾಕಾರ ಮಳೆಗೆ ಮಲಪ್ರಭಾ ನದಿ ನೀರಿನ ಮಟ್ಟ ಏರಿಕೆಯಾಗಿದೆ.

ಕರಾವಳಿ ಭಾಗ, ಮಲೆನಾಡಿನ ತುಂಗಾ, ಭದ್ರಾ, ಗಂಗಾವಳಿ, ಅಘನಾಶಿನಿ, ಕಾಳಿ, ಬೇಡ್ತಿ, ಶರಾವತಿ ನದಿಗಳಲ್ಲೂ ನೀರಿನ ಮಟ್ಟ ಕೊಂಚ ಏರಿಕೆಯಾಗಿದೆ. ಬೆಳಗಾವಿ ಜಿಲ್ಲೆ ಹಿಪ್ಪರಗಿ ಹಾಗೂ ಮಲಪ್ರಭಾ, ಮಲೆನಾಡಿನ ತುಂಗಾ, ಭದ್ರಾ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿದೆ.

ಉ. ಕ. ಜಿಲ್ಲೆ ಯಲ್ಲಾಪುರ ತಾಲೂಕಿನ ಉಮ¬¾ಚಿY ಪಂಚಾಯ್ತಿಯ ಬಾಳೆಗದ್ದೆಯಲ್ಲಿ ಮನೆಯೊಂದರ ಮೇಲೆ ಮರದ ಟೊಂಗೆ ಬಿದ್ದು ಹಾನಿಯಾಗಿದೆ. ಮನೆಯವರೆಲ್ಲರೂ ನಿದ್ರಿಸುತ್ತಿದ್ದಾಗ ಸಂಭವಿಸಿದ್ದು, ಹಾನಿ ಸಂಭವಿಸಿಲ್ಲ.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು, ಶೃಂಗೇರಿಯಲ್ಲಿ ಧಾರಾಕಾರ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. 10ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ವಿದ್ಯುತ್‌ ಕಂಬಗಳು ಉರುರುಳಿ ಬಿದ್ದಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಕರೆಂಟ್‌ ಇಲ್ಲದೇ ಪರದಾಡುವಂತಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ. ಧಾರವಾಡ, ಹಾವೇರಿ, ಬೀದರ್‌, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ.

ಹಾವೇರಿ ಜಿಲ್ಲೆಯ ಶಾಸಕರಿಂದ ಸ್ವಂತ ಖರ್ಚಲ್ಲಿ ಮೋಡ ಬಿತ್ತನೆ

ಹಾವೇರಿ: ಮಳೆ ಕೊರತೆ ಹಿನ್ನೆಲೆಯಲ್ಲಿ ರೈತರ ನೆರವಿಗೆ ಧಾವಿಸಿರುವ ರಾಣೇಬೆನ್ನೂರು ಶಾಸಕ ಪ್ರಕಾಶ್‌ ಕೋಳಿವಾಡ ಜಿಲ್ಲಾದ್ಯಂತ ಮೋಡ ಬಿತ್ತನೆ ಮಾಡಲು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಜು.7ರಿಂದ 3 ದಿನಗಳ ಕಾಲ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯ ನಡೆಸುವುದಾಗಿ ತಿಳಿಸಿದ್ದಾರೆ. ಮೋಡ ಬಿತ್ತನೆಗೆ ಕೇಂದ್ರ ಸರ್ಕಾರದಿಂದ ಪರವಾನಗಿ ಕೇಳಲಾಗಿತ್ತು. ಶುಕ್ರವಾರ ಅವಕಾಶ ನೀಡಿರುವ ಮಾಹಿತಿ ಬಂದಿದೆ. ಮೋಡ ಬಿತ್ತನೆ ಕಾರ್ಯಕ್ಕಾಗಿಯೇ ಅಮೆರಿಕದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ ಅತ್ಯಾಧುನಿಕ ವಿಮಾನ ಬಳಸಲಾಗುತ್ತಿದ್ದು, ಸೋಮವಾರವೇ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದು ತಲುಪಲಿದೆ. ಈ ಕಾರ್ಯಾಚರಣೆಗಾಗಿ ಈಗಾಗಲೇ ಪೈಲಟ್‌ಗಳಿಗೆ ವಿಶೇಷ ತರಬೇತಿ ಸಹ ನೀಡಲಾಗಿದೆ.

ಹಾರಂಗಿ ನೀರಿನ ಮಟ್ಟ 3 ಅಡಿ ಏರಿಕೆ

ಕುಶಾಲನಗರ: ಕೊಡಗಿನ ಹಾರಂಗಿ ಜಲಾಶಯಯಕ್ಕೆ ಒಳಹರಿವು ಮತ್ತಷ್ಟು ಹೆಚ್ಚಾಗಿದೆ. ಈ ಬಾರಿಯ ಮಳೆಗಾಲದಲ್ಲಿ ಮೊದಲ ಬಾರಿಗೆ ಒಳಹರಿವು 1 ಸಾವಿರ ಕ್ಯುಸೆಕ್‌ ದಾಟಿದೆ. ಜಲಾಶಯದ ಗರಿಷ್ಠ ಮಟ್ಟ 2859 ಅಡಿ. ಇಂದಿನ ನೀರಿನ ಮಟ್ಟ 2830.58 ಅಡಿ. ಕಳೆದ ವರ್ಷ ಇದೇ ದಿನ 2852.98 ಅಡಿಗಳಾಗಿತ್ತು. ಇಂದಿನ ನೀರಿನ ಒಳಹರಿವು 1,113 ಕ್ಯುಸೆಕ್‌, ಕಳೆದ ವರ್ಷ ಇದೇ ದಿನ 7,582 ಕ್ಯುಸೆಕ್‌. ಇಂದಿನ ಹೊರ ಹರಿವು 180 ಕ್ಯುಸೆಕ್‌. ಕಳೆದ ವರ್ಷ ಇದೇ ದಿನ ನೀರಿನ ಹೊರ 6,604 ಕ್ಯುಸೆಕ್‌ ಆಗಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Udayavani