ನವದೆಹಲಿ: ಶೇ.20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್(ಇ20) ಯೋಜನೆಯು ವಾಹನಗಳ ಮೈಲೇಜ್ ಮೇಲೆ ಪರಿಣಾಮ ಬೀರುವ ಕಳವಳ ವ್ಯಕ್ತಪಡಿಸಿರುವ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ಈ ಯೋಜನೆಯನ್ನು ಹಿಂಪಡೆಯುವಂತೆ ಕೋರಿ ಪ್ರಧಾನಿ ಮೋದಿಗೆ ಪತ್ರ ಬರೆಯುವುದಾಗಿ ಶುಕ್ರವಾರ ಹೇಳಿದ್ದಾರೆ.
ಈ ಬಗ್ಗೆ ವಿಡಿಯೋವೊಂದನ್ನು ಟ್ವೀಟ್ ಮಾಡಿರುವ ಕೇಜ್ರಿವಾಲ್, 'ಸುಪ್ರೀಂಕೋರ್ಟ್‌ಗೆ ನೀಡಿರುವ ಮಾಹಿತಿಯಲ್ಲಿ ಕೇಂದ್ರವು, ಇದು ಕೇವಲ ಪ್ರಾಯೋಗಿಕ ಯೋಜನೆ ಎಂದಿರುವುದಾಗಿ ವರದಿಯಾಗಿದೆ. ಆದರೆ ಕೇಂದ್ರ ಇದನ್ನು ತಳ್ಳಿಹಾಕುತ್ತಿದೆ. ಇದು ಪ್ರಾಯೋಗಿಕವೇ ಆಗಿದ್ದರೆ ಅದು ಕೆಲವು ವಾಹನಗಳ ಮೇಲಷ್ಟೇ ಪ್ರಯೋಗ ಮಾಡಬೇಕು. ಎಥೆನಾಲ್ ಮಿಶ್ರಿತ ಇಂಧನ ಬಳಸಿ ವಾಹನಗಳಿಗೆ ಹಾನಿಯಾದರೆ ಸರ್ಕಾರವು ಪರಿಹಾರ ನೀಡಲಿದೆಯೇ' ಎಂದಿದ್ದಾರೆ.

