Dailyhunt Logo
  • Light mode
    Follow system
    Dark mode
    • Play Story
    • App Story
ಇಲ್ಲಿ ಬಳಸಿದ ಪದವನ್ನು ಇನ್ನು ಮುಂದೆ ಎಲ್ಲೂ ಬಳಸಲ್ಲ.. ಪಶ್ಚಾತ್ತಾಪಪಟ್ಟು ಕಣ್ಣೀರಿಟ್ಟ ಮಂಜ

ಇಲ್ಲಿ ಬಳಸಿದ ಪದವನ್ನು ಇನ್ನು ಮುಂದೆ ಎಲ್ಲೂ ಬಳಸಲ್ಲ.. ಪಶ್ಚಾತ್ತಾಪಪಟ್ಟು ಕಣ್ಣೀರಿಟ್ಟ ಮಂಜ

ಬೆಂಗಳೂರು: ʼಬಿಗ್‌ ಬಾಸ್‌ʼ ಮನೆಯಿಂದ ಮಾಡರ್ನ್‌ ಮಹಾಕವಿ ಮಂಜ ಅವರು ಅನಿರೀಕ್ಷಿತ ಘಟನೆಯಿಂದಾಗಿ ಎಲಿಮಿನೇಟ್‌ ಆಗಿದ್ದಾರೆ. ಅಸಭ್ಯವಾಗಿ ಮಾತನಾಡಿದ್ದಕ್ಕಾಗಿ ಆಯೋಜಕರು ಅವರನ್ನು ಹೊರಗಡೆ ಕರೆಸಿದ್ದಾರೆ.

ಮಂಜು ಅವರು ವೇದಿಕೆಗೆ ಬಂದಿದ್ದಾರೆ. ಸುದೀಪ್‌ ಅವರನ್ನು ನೋಡಿ ಮಂಜ ಗಳಗಳನೇ ಅತ್ತಿದ್ದಾರೆ.

ಏನಕ್ಕೆ ಅಳುತ್ತಿದ್ದೀರಿ ಎಂದು ಸುದೀಪ್‌ ಕೇಳಿದ್ದಾರೆ. ಇದಕ್ಕೆ ಮಂಜ ತಪ್ಪಾಯಿತು ಎಂದು ಕಣ್ಣೀರಿಡುತ್ತಲೇ ಹೇಳಿದ್ದಾರೆ.

ತಪ್ಪಾಯಿತು ಬಿಡಿ. ತಿದ್ದಿಕೊಳ್ಳಿ. ಒಳ್ಳೆ ಟ್ಯಾಲೆಂಟೆಡ್‌ ಇದ್ದೀರಿ. ʼಬಿಗ್‌ ಬಾಸ್‌ʼ ವರ್ಷದ ಕನಸು ಎಂದು ಸುದೀಪ್‌ ಕೇಳಿದ್ದಾರೆ.

10 ವರ್ಷದ ಕನಸು ಸರ್‌ ಎಂದಿದ್ದಾರೆ. ʼʼ10 ವರ್ಷದ ಕನಸು ಅಂದ್ರೆ ಯಾಕೆ ಹಿಂಗೆ ಮಾಡಿಕೊಂಡ್ರಿ. ನೀವೇ ಹೇಳಿ ನಾನೆಷ್ಟು ಸಲ ತಿದ್ದೋಕೆ ಪ್ರಯತ್ನ ಪಟ್ಟೆ ಎಂದು ಸುದೀಪ್‌ ಹೇಳಿದ್ದಾರೆ.

ಇದಕ್ಕೆ ಮಂಜ ತುಂಬಾ ಅವಕಾಶ ಕೊಟ್ಟಿದ್ದೀರಿ ಸರ್.‌ ನಾನು ಜೀವನದಲ್ಲಿ ತುಂಬಾ ನಂಬೋದು ಎರಡೇ ಎಮೋಷನ್ಸ್‌, ಒಂದು ನಗು ನ್ನೊಂದು ಅಳು. ನಿನ್ನೆ ನಿಮ್ಮ ಕಣ್ಣಲ್ಲಿ ನೀರು ನೋಡಿಬಿಟ್ಟೆ. ಅದಕ್ಕೆ ನಾನು ಕೂಡ ಒಂದು ಮೂಲಃ ಕಾರಣ. ತುಂಬಾ ಬೇಜಾರ್‌ ಆಯಿತು ಸರ್.‌ ನೀವೆಲ್ಲ ನಮ್ಮ ಕನಸು ಸರ್.‌ ನಿಮ್ಮನ್ನೆಲ್ಲ ನೋಡೋದು. ನನ್ನ ಕನಸು ಕಣ್ಣಲ್ಲಿ ನೀರು ಹಾಕಿಸಿಬಿಟ್ಟೆ ಸರ್‌ ಎಂದು ಹೇಳಿ ಕಿಚ್ಚನನನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ.

ನಾನು ಯಾವತ್ತೂ ಅಂತಹ ಬಳಸಲ್ಲ. ಲೈಫ್‌ ಅಲ್ಲಿ ನನಗೆ ಯಾರಾದ್ರೂ ಅಂತಹ ಪದ ಬಳಸಿದ್ರೆ ನಾನು ಯಾವತ್ತೂ ಬಳಸಲ್ಲ. ನಾನು ಮಾತಿನಿಂದಲೇ ʼಬಿಗ್‌ ಬಾಸ್‌ʼಗೆ ಬಂದೆ. ಆದರೆ ನನ್ನ ಮಾತೇ ನನ್ನನ್ನು ಎಲಿಮಿನೇಟ್‌ವರೆಗೂ ತಂದು ನಿಲ್ಲಿಸಿದೆ ಎಂದು ಮಂಜ ಹೇಳಿದ್ದಾರೆ.

ನಿಮಗೆ ಇದು ಸಿಕ್ಕ ಎರಡು ಅವಕಾಶ. ನಾನು ನಿಮ್ಮನ್ನು ತುಂಬಾ ಸಲ ತಿದ್ದೋಕೆ ಪ್ರಯತ್ನಪಟ್ಟೆ ಎಂದು ಕಿಚ್ಚ ಮಂಜಗೆ ಸಮಾಧಾನಪಡಿಸಿದ್ದಾರೆ.

ನಿಮ್ಮ ನಾಲಗೆಯನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಿ. ನಿಮ್ಮಲ್ಲಿ ನಾಲಗೆ ಮಾತ್ರ ತುಂಬಾ ಪ್ರಾಮಾಣಿಕಯಿದೆ. ನಿಮ್ಮ ಹಿಂದೆ ಒಬ್ಬ ಅಣ್ಣ ಇದ್ದಾನೆ ಎಂದು ಕಿಚ್ಚ ಅವರು ಹೇಳಿದ್ದಾರೆ.

ಆರಾಮರಾಗಿರಿ ಎಂದು ಸುದೀಪ್‌ ಮಂಜನ ಬೆನ್ನು ತಟ್ಟಿದ್ದಾರೆ.

ಸಂಗೀತಾ ಭಟ್‌ ಔಟ್..‌

ಇನ್ನು ಸಂಗೀತಾ ಭಟ್‌ ಅವರು ಆರೋಗ್ಯ ಸಮಸ್ಯೆಯಿಂದಾಗಿ ಸಂಗೀತಾ ಅವರು ಮನೆಯಿಂದ ಆಚೆ ಬಂದಿದ್ದಾರೆ. ಇತ್ತೀಚೆಗೆ ಅವರಿಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ವೈದ್ಯರ ಸಲಹೆ ಮೇರೆಗೆ ಅವರರು ಮನೆಯಿಂದ ಆಚೆ ಬಂದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani