Dailyhunt Logo
  • Light mode
    Follow system
    Dark mode
    • Play Story
    • App Story
Independence Day special: ಮನೆಯಲ್ಲೇ ಸುಲಭವಾಗಿ ಮಾಡಿ ತ್ರಿವರ್ಣ ತೆಂಗಿನಕಾಯಿ ಲಡ್ಡು!

Independence Day special: ಮನೆಯಲ್ಲೇ ಸುಲಭವಾಗಿ ಮಾಡಿ ತ್ರಿವರ್ಣ ತೆಂಗಿನಕಾಯಿ ಲಡ್ಡು!

80ನೇ ಸ್ವಾತಂತ್ರ್ಯೋತ್ಸವಕ್ಕೆ ಇಡೀ ದೇಶವೇ ಸಜ್ಜುಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಮನೆಮಂದಿಗೆಲ್ಲ ದೇಶಭಕ್ತಿಯ ಜೊತೆಗೆ ಸಿಹಿ ಸವಿಯುವ ಆಸೆಯಾಗುವುದು ಸಹಜ.ಹಾಗಾಗಿ ನಾವು ಈ ಬಾರಿ ತಿರಂಗಾ ಥೀಮ್‌ ಬಳಸಿ ತೆಂಗಿನಕಾಯಿ ಲಡ್ಡು ತಯಾರಿಸುವ ವಿಧಾನ ತಿಳಿಯೋಣ...ಇದು ನೋಡಲು ಆಕರ್ಷಕವಾಗಿ, ಸವಿಯಲು ಅತ್ಯಂತ ರುಚಿಕರವಾಗಿರುವ ಈ ಸಿಹಿಯನ್ನು ಅತ್ಯಂತ ಕಡಿಮೆ ಪದಾರ್ಥಗಳನ್ನು ಬಳಸಿ ಹಾಗೂ ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು
ಒಣ ತೆಂಗಿನಕಾಯಿ-ಎರಡು ಕಪ್, ಹಾಲಿನ ಪುಡಿ-ಅರ್ಧ ಕಪ್, ಸಕ್ಕರೆ-1/4 ಕಪ್, ಹಾಲು-ಅರ್ಧ ಕಪ್, ಹಸಿರು ಬಣ್ಣ (ಪಿಸ್ತಾ ಕ್ರೀಮ್), ಕೇಸರಿ ಬಣ್ಣ (ಕೇಸರಿ ಎಸಳು), ತುಪ್ಪ-4 ಚಮಚ, ಏಲಕ್ಕಿ ಪುಡಿ-ಸ್ವಲ್ಪ

ತಯಾರಿಸುವ ವಿಧಾನ
ಮೊದಲಿಗೆ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು, ಅದಕ್ಕೆ 4 ಚಮಚದಷ್ಟು ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಬೇಕು. ತುಪ್ಪ ಬಿಸಿಯಾದ ನಂತರ ಅದಕ್ಕೆ ಒಣ ತೆಂಗಿನಕಾಯಿಯನ್ನು ಸೇರಿಸಿ, ಸಣ್ಣ ಉರಿಯಲ್ಲಿ ಮೂರರಿಂದ ನಾಲ್ಕು ನಿಮಿಷಗಳ ಕಾಲ ಹುರಿಯಿರಿ. ತೆಂಗಿನಕಾಯಿಯ ಬಣ್ಣ ಬದಲಾಗದಂತೆ ಎಚ್ಚರ ವಹಿಸುತ್ತಾ, ಅದರಲ್ಲಿರುವ ತೇವಾಂಶ ಕಡಿಮೆಯಾಗುವವರೆಗೆ ಮಾತ್ರ ಹುರಿಯಿರಿ.

ನಂತರ ಅದಕ್ಕೆ ಅರ್ಧ ಕಪ್ ನಷ್ಟು ಹಾಲಿನ ಪುಡಿ,ಸಕ್ಕರೆ, ಹಾಲು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಮಿಶ್ರಣವು ಗಟ್ಟಿಯಾಗುತ್ತಾ, ಬಾಣಲೆಯ ತಳವನ್ನು ಬಿಡಲು ಪ್ರಾರಂಭಿಸುವವರೆಗೆ ಸಣ್ಣ ಉರಿಯಲ್ಲಿಯೇ ಕೈಯಾಡಿಸಿರಿ. ಮಿಶ್ರಣವು ಲಾಡು ಕಟ್ಟುವ ಹದಕ್ಕೆ ಬಂದ ತಕ್ಷಣ ಒಲೆಯನ್ನು ಆಫ್ ಮಾಡಿ, ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ.
ನಂತರ, ಅದನ್ನು ಸಮಾನವಾಗಿ ಮೂರು ಭಾಗಗಳಾಗಿ ವಿಂಗಡಿಸಿಕೊಳ್ಳಿ. ಮೊದಲನೆಯ ಭಾಗಕ್ಕೆ ಯಾವುದೇ ಬಣ್ಣ ಸೇರಿಸದೇ ಹಾಗೆಯೇ ಬಿಳಿ ಬಣ್ಣವಾಗಿ ಇಟ್ಟುಕೊಳ್ಳಿ. ಎರಡನೇ ಭಾಗಕ್ಕೆ ನೀರಿನಲ್ಲಿ ನೆನೆಸಿಟ್ಟ ಕೇಸರಿ ಎಸಳಿನ ಹನಿಯನ್ನು ಚೆನ್ನಾಗಿ ಬೆರೆಸಿಕೊಳ್ಳಿ. ಮೂರನೇ ಭಾಗಕ್ಕೆ ಸ್ವಲ್ಪ ಪಿಸ್ತಾ ಕ್ರೀಮ್ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.

ಈಗ ಪ್ರತ್ಯೇಕವಾಗಿ ಇಟ್ಟುಕೊಂಡಿರುವ ಮೂರೂ ಬಣ್ಣದ ಮಿಶ್ರಣಗಳಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ಅಂಗೈಯಲ್ಲಿ ಹದವಾಗಿ ತಟ್ಟಿ ಸುಂದರವಾದ ಲಾಡುಗಳನ್ನು ಆಕಾರಗೊಳಿಸಿ. ಕೊನೆಯಲ್ಲಿ ಈ ಲಾಡುಗಳನ್ನು ಸ್ವಲ್ಪ ಒಣ ತೆಂಗಿನತುರಿಯಲ್ಲಿ ಹೊರಳಿಸಿದರೆ, ನೋಡಲು ಅತ್ಯಂತ ಆಕರ್ಷಕವಾದ ಮತ್ತು ಸವಿಯಲು ಮೃದುವಾದ ತ್ರಿವರ್ಣ ತೆಂಗಿನಕಾಯಿ ಲಡ್ಡು ಸವಿಯಲು ಸಿದ್ಧ.

Dailyhunt
Disclaimer: This content has not been generated, created or edited by Dailyhunt. Publisher: Udayavani