ತಾಷ್ಕೆಂಟ್ (ಉಜ್ಬೆಕಿಸ್ಥಾನ್): ಇಲ್ಲಿ ಶುಕ್ರವಾರದಿಂದ ಮೇ 16ರವರೆಗೆ ನಡೆಯಲಿರುವ ಅಂಡರ್-15 ಮತ್ತು ಅಂಡರ್-17 ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪರ 56 ಮಂದಿ ಸ್ಪರ್ಧೆಗಿಳಿಯುತ್ತಿದ್ದು, ಹೆಚ್ಚಿನ ಪದಕಗಳು ಬರುವ ನಿರೀಕ್ಷೆಯಿದೆ.
ಅಂಡರ್-17 ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ತಲಾ 13 ಮಂದಿ ಸ್ಪರ್ಧಿಸುತ್ತಿದ್ದಾರೆ.
ಅಂಡರ್-15 ಬಾಲಕರ, ಬಾಲಕಿಯರ ವಿಭಾಗಗಳಲ್ಲಿ ತಲಾ 15 ಮಂದಿ ಸ್ಪರ್ಧಿಸುತ್ತಿದ್ದಾರೆ. ಅ-17ನಲ್ಲಿ 44ರಿಂದ 80+ ಕೆಜಿ ವರೆಗೆ ಸ್ಪರ್ಧೆಗಳಿದ್ದರೆ, ಅ-15ನಲ್ಲಿ 33ರಿಂದ 70+ ಕೆಜಿ ತನಕ ಸ್ಪರ್ಧೆಗಳಿರಲಿವೆ.

