ರಿಯೋ: ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 68ಕ್ಕೆ ಏರಿಕೆಯಾಗಿದ್ದು, 200ಕ್ಕ ಅಧಿಕ ಮಂದಿ ಗಾಯಗೊಂಡಿದ್ದಾರೆ. ಭೂಕಂಪ ಸಂಭವಿಸಿದ ಇಂಡೋನೇಷ್ಯಾದ ಫ್ಲೋರ್ಸ್ ದ್ವೀಪದಲ್ಲಿ ಸೋಮವಾರ 81ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಇತ್ತು. ಈಗಲೂ ಸಾವಿರಾರು ಜನರು ನೆರವಿಗಾಗಿ ಕಾಯುತ್ತಿದ್ದಾರೆ.
ಭೂಕಂಪದಿಂದ ಸಂಪರ್ಕ ಕಡಿತಗೊಂಡಿವೆ. 1300 ಮನೆಗಳು ನಾಶಗೊಂಡಿದ್ದು, 5 ಸಾವಿರಕ್ಕೂ ಮಿಕ್ಕಿ ಜನರನ್ನುನಿರಾಶ್ರಿತರ ಕೇಂದ್ರಗಳಿಗೆ ಕಳುಹಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದ್ದಾರೆ. ಪ್ರಾಂತ್ಯ ರಾಜ್ಯಪಾಲರು 14 ದಿನಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

