ನವದೆಹಲಿ: ವೈವಾಹಿಕ ಭಿನ್ನಾಭಿಪ್ರಾಯವಿರುವ ಸಂದರ್ಭಗಳಲ್ಲಿ ಮಹಿಳಾ ಸರ್ಕಾರಿ ಉದ್ಯೋಗಿಯು ತನ್ನ ಪತಿಯ ಬದಲು, ತನ್ನ ಮಗು ಅಥವಾ ಮಕ್ಕಳ ಹೆಸರನ್ನು ಕುಟುಂಬ ಪಿಂಚಣಿಗೆ ನಾಮನಿರ್ದೇಶನ ಮಾಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರೀಯ ನಾಗರಿಕ ಸೇವೆಗಳ(ಪಿಂಚಣಿ) ನಿಯಮಗಳು, 2021ರ ನಿಯಮ 50ರ ಪ್ರಕಾರ, ಸರ್ಕಾರಿ ಉದ್ಯೋಗಿ ಅಥವಾ ನಿವೃತ್ತ ಸರ್ಕಾರಿ ಉದ್ಯೋಗಿಯ ಮರಣದ ನಂತರ ಕುಟುಂಬ ಪಿಂಚಣಿಯನ್ನು ಮಂಜೂರು ಮಾಡಬಹುದಾಗಿದೆ.
ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಇದೀಗ ನಿಯಮಗಳಿಗೆ ತಿದ್ದುಪಡಿ ತಂದಿದೆ. ವೈವಾಹಿಕ ಭಿನ್ನಾಭಿಪ್ರಾಯವಿರುವ ಸಂದರ್ಭಗಳಲ್ಲಿ ಮಹಿಳಾ ಸರ್ಕಾರಿ ಉದ್ಯೋಗಿಯು ತನ್ನ ಮಗು ಅಥವಾ ಮಕ್ಕಳನ್ನು ಕುಟುಂಬ ಪಿಂಚಣಿಗೆ ನಾಮಿನಿಯನ್ನಾಗಿ ನೇಮಿಸಬಹುದು ಎಂದು ಹೇಳಿದೆ.

