Dailyhunt Logo
  • Light mode
    Follow system
    Dark mode
    • Play Story
    • App Story
IPL: ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಬಿಟ್ಟು ಹೊರನಡೆಯಲು ಮುಂದಾದ ಕುಲದೀಪ್ ಯಾದವ್

IPL: ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಬಿಟ್ಟು ಹೊರನಡೆಯಲು ಮುಂದಾದ ಕುಲದೀಪ್ ಯಾದವ್

ಹೊಸದಿಲ್ಲಿ: ಈ ಬಾರಿಯ ಐಪಿಎಲ್‌ (IPL) ಮುಗಿದು ಇನ್ನೇನು ತಿಂಗಳಾಗಿಲ್ಲ, ಆಗಲೇ ಮುಂದಿನ ಐಪಿಎಲ್‌ ಸೀಸನ್‌ನ ಲೆಕ್ಕಾಚಾರಗಳು ಆರಂಭವಾಗಿದೆ. 2027ರ ಐಪಿಎಲ್‌ ಮಾರ್ಚ್‌ 10ರಿಂದ ಆರಂಭವಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ಹೇಳಿದ ಕೆಲವೇ ದಿನಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿಯಲ್ಲಿ ಹೊಸ ಬದಲಾವಣೆ ಬಗ್ಗೆ ಚಟುವಟಿಕೆಗಳು ಆರಂಭವಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪ್ರಮುಖ ಸ್ಪಿನ್ನರ್‌ ಕುಲದೀಪ್‌ ಯಾದವ್‌ (Kuldeep Yadav) ಅವರು ತಂಡ ಬಿಡಲು ಸಿದ್ದರಾಗಿದ್ದಾರೆ ಎಂದು ವರದಿ ಹೇಳಿದೆ. ಟೈಮ್ಸ್‌ ಆಫ್‌ ಇಂಡಿಯಾ ವರದಿಯ ಪ್ರಕಾರ ಐದು ವರ್ಷಗಳ ಕಾಲ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆಡಿದ ಚೈನಮನ್‌ ಸ್ಪಿನ್ನರ್‌ ಇದೀಗ ಹೊಸ ತಂಡ ಸೇರಲು ಸಜ್ಜಾಗಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 2026ರ ಸೀಸನ್‌ ನಲ್ಲಿ ಸಾಧಾರಣ ಪ್ರದರ್ಶನ ನೀಡಿತ್ತು. ಆಡಿದ 14 ಪಂದ್ಯಗಳಲ್ಲಿ ಏಳು ಪಂದ್ಯಗಳಲ್ಲಿ ಗೆದ್ದಿದ್ದ ಅಕ್ಷರ್‌ ಪಟೇಲ್‌ ನೇತೃತ್ವದ ತಂಡವು ಅಂಕಪಟ್ಟಿಯಲ್ಲಿ ಆರನೇ ಸ್ಥಾನಿಯಾಗಿತ್ತು.

ಈ ಸೀಸನ್‌ ನಲ್ಲಿ ಕುಲದೀಪ್‌ ಯಾದವ್‌ ಅವರು 12 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 10 ವಿಕೆಟ್‌ ಗಳನ್ನು ಪಡೆದಿದ್ದರು.

2026 ರ ನಿರಾಶಾದಾಯಕ ಅಭಿಯಾನದ ನಂತರ ಎಡಗೈ ಮಣಿಕಟ್ಟಿನ ಸ್ಪಿನ್ನರ್ ಕುಲದೀಪ್‌ ಅವರನ್ನು ಲಕ್ನೋ ಸೂಪರ್‌ ಜೈಂಟ್ಸ್ ಪ್ರಮುಖ ಗುರಿಯಾಗಿ ಗುರುತಿಸಿದೆ‌ ಎಂದು ವರದಿ ಹೇಳಿದೆ. ಇತ್ತೀಚಿನ ವಾರಗಳಲ್ಲಿ ಈ ಒಪ್ಪಂದದ ಕುರಿತು ಚರ್ಚೆಗಳು ವೇಗವನ್ನು ಪಡೆಯುತ್ತಿವೆ ಎನ್ನಲಾಗಿದೆ.

ಇದು ಎಲ್‌ಎಸ್‌ಜಿ ಯ ಮಾಜಿ ನಾಯಕ ಮತ್ತು ದಾಖಲೆಯ 27 ಕೋಟಿ ರೂ. ಗೆ ಖರೀದಿ ಮಾಡಿದ್ದ ರಿಷಭ್ ಪಂತ್ ಅವರಿಗೆ ಬದಲಾಗಿ ಕುಲದೀಪ್‌ ಯಾದವ್‌ ರನ್ನು ಪಡೆಯಲು ಲಕ್ನೋ ಮ್ಯಾನೇಜ್‌ಮೆಂಟ್ ಸಜ್ಜಾಗಿದೆ ಎನ್ನಲಾಗಿದೆ. ಹೀಗಾದಲ್ಲಿ ರಿಷಭ್‌ ಪಂತ್‌ ಅವರು ಮತ್ತೆ ಡೆಲ್ಲಿ ಕ್ಯಾಪಿಟಲ್ಸ್‌ ಪಾಲಾಗಲಿದ್ದಾರೆ.

ಎಲ್‌ಎಸ್‌ಜಿ ತಂಡಕ್ಕೆ 2026 ಅತ್ಯಂತ ಕಳಪೆ ಸೀಸನ್‌ ಆಗಿತ್ತು. 14 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯ ಗೆದ್ದ ಲಕ್ನೋ ಕೊನೆಯ ಸ್ಥಾನಿಯಾಗಿ ಸೀಸನ್‌ ಮುಗಿಸಿತ್ತು. ಹೀಗಾಗಿ ಮುಂದಿನ ಸೀಸನ್‌ ಗೆ ಒಂದಿಷ್ಟು ಬದಲಾವಣೆಯತ್ತ ಮನ ಮಾಡಿದೆ. ಇದೇ ವೇಳೆ ಕುಲದೀಪ್‌ ಯಾದವ್‌ ಅವರಿಗೆ ಎಲ್‌ಎಸ್‌ಜಿಯ ಏಕಾನಾ ಕ್ರೀಡಾಂಗಣದಲ್ಲಿನ ಕೆಲವು ಪಿಚ್‌ಗಳು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದ ಫ್ಲಾಟ್ ಟ್ರ್ಯಾಕ್‌ಗಿಂತ ಹೆಚ್ಚು ಸೂಕ್ತವಾಗಿರುತ್ತದೆ.

ಕುಲದೀಪ್‌ 202ರ ಸೀಸನ್‌ ನಲ್ಲಿ 14 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಕಬಳಿಸಿ ಟೂರ್ನಮೆಂಟ್‌ನ ಅತ್ಯಂತ ಪರಿಣಾಮಕಾರಿ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದರು. ಐಪಿಎಲ್ 2025 ಕ್ಕೂ ಮೊದಲು ದೆಹಲಿ ಕ್ಯಾಪಿಟಲ್ಸ್ ₹13.25 ಕೋಟಿಗೆ ಉಳಿಸಿಕೊಂಡಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Udayavani