ಮಡಗಾಂವ್ (ಗೋವಾ): ಇಲ್ಲಿನ ಜವಾಹರಲಾಲ್ ನೆಹರೂ ಮೈದಾನದಲ್ಲಿ ಶನಿವಾರ ನಡೆಯುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಪಂದ್ಯದಲ್ಲಿ ಆತಿಥೇಯ ಎಫ್‌ಸಿ ಗೋವಾ ಮತ್ತು ಬೆಂಗಳೂರು ಎಫ್‌ಸಿ ಕಣಕ್ಕಿಳಿಯಲಿವೆ.
ರಾತ್ರಿ 7.30ಕ್ಕೆ ಪಂದ್ಯ ಶುರುವಾಗಲಿದೆ. ಆಡಿರುವ 6 ಪಂದ್ಯಗಳಲ್ಲಿ 3 ಜಯ, 1 ಸೋಲು, 2 ಡ್ರಾದೊಂದಿಗೆ 11 ಅಂಕ ಗಳಿಸಿರುವ ಬೆಂಗಳೂರು ಎಫ್‌ಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
6ರಲ್ಲಿ 2 ಜಯ, 4 ಸೋಲು ಕಂಡಿರುವ ಗೋವಾ 10 ಅಂಕದೊಂದಿಗೆ 6ನೇ ಸ್ಥಾನದಲ್ಲಿದೆ.
ಗೋವಾದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಮೇಲೇರಲು ಸುನೀಲ್ ಛೆತ್ರಿ ನಾಯಕತ್ವದ ಬೆಂಗಳೂರು ಕಣ್ಣಿಟ್ಟಿದೆ.

