Dailyhunt Logo
  • Light mode
    Follow system
    Dark mode
    • Play Story
    • App Story
'ಇಸ್ಲಾಮಿಕ್ ನ್ಯಾಟೋ' ದೊಡ್ಡ, ದಿಟ್ಟ, ಹೆಜ್ಜೆ: ಅಮೆರಿಕ ಅಧ್ಯಕ್ಷ ಟ್ರಂಪ್‌

'ಇಸ್ಲಾಮಿಕ್ ನ್ಯಾಟೋ' ದೊಡ್ಡ, ದಿಟ್ಟ, ಹೆಜ್ಜೆ: ಅಮೆರಿಕ ಅಧ್ಯಕ್ಷ ಟ್ರಂಪ್‌

ವಾಷಿಂಗ್ಟನ್‌: ಇತ್ತೀಚೆಗೆ ಸೌದಿ ಅರೇಬಿಯಾ, ಟರ್ಕಿ ಹಾಗೂ ಪಾಕಿಸ್ತಾನ ಮಾಡಿಕೊಂಡ 'ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದ' ತಮ್ಮನ್ನು ತಾವು ರಕ್ಷಿಸಿಕೊಳ್ಳುವತ್ತ 'ದೊಡ್ಡ, ದಿಟ್ಟ ಮತ್ತು ಪ್ರಮುಖ ಮೊದಲ ಹೆಜ್ಜೆ'. ಇದೊಂದು ಅರ್ಥಪೂರ್ಣವಾದ ಒಪ್ಪಂದ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ.

ಈ ಬಗ್ಗೆ ಟ್ರುತ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, ಸೌದಿ, ಟರ್ಕಿ ಮತ್ತು ಪಾಕಿಸ್ತಾನವು ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ನೋಡಿ ತುಂಬಾ ಸಂತೋಷವಾಗಿದೆ. ಈ ಒಪ್ಪಂದವು ದೇಶಗಳು ಹೆಚ್ಚು ಅರ್ಥಪೂರ್ಣ ರೀತಿಯಲ್ಲಿ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ತೋರಿಸುತ್ತದೆ. ಪ್ರಸ್ತಾಪಿತ ಮೂರು ರಾಷ್ಟ್ರಗಳ ಶ್ರೇಷ್ಠ ನಾಯಕತ್ವಕ್ಕೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani