Dailyhunt Logo
  • Light mode
    Follow system
    Dark mode
    • Play Story
    • App Story
ಜನಾರ್ದನ ರೆಡ್ಡಿಗೆ ಮತ್ತೆ ಗಣಿ ಸಂಕಷ್ಟ?

ಜನಾರ್ದನ ರೆಡ್ಡಿಗೆ ಮತ್ತೆ ಗಣಿ ಸಂಕಷ್ಟ?

ಳ್ಳಾರಿ: ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಮಾಜಿ ಸಚಿವ, ಗಂಗಾವತಿ ಹಾಲಿ ಶಾಸಕ ಜಿ. ಜನಾರ್ದನ ರೆಡ್ಡಿಗೆ ಮತ್ತೂಮ್ಮೆ ಗಣಿ ಸಂಕಷ್ಟ ಎದುರಾಗಿದೆ.

ಆಂಧ್ರದ ಗಡಿಗೆ ಹೊಂದಿಕೊಂಡಿರುವ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್‌ ಕಂಪೆ‌ನಿ (ಒಎಂಸಿ)ಯು ರಾಜ್ಯದ ಗಡಿಯೊಳಗೆ 68.5 ಹೆಕ್ಟೇರ್‌ಪ್ರದೇಶವನ್ನು ಅಕ್ರಮ ವಾಗಿ ಒತ್ತುವರಿ ಮಾಡಿರುವುದು ತಾಂತ್ರಿಕ ಸಮೀಕ್ಷೆಗಳಿಂದ ಬಹಿರಂಗವಾ ದ ಹಿನ್ನೆಲೆಯಲ್ಲಿ ಕೂಡಲೇ ಕ್ರಮಕೈಗೊಳ್ಳುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯ ಕರ್ನಾಟಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ತಾಕೀತು ಮಾಡಿದೆ.

ಒಎಂಸಿ ಕಂಪೆನಿ ಜಿಲ್ಲೆಯ ಸಂಡೂರು ತಾಲೂಕಿನ ವಿಠಲಾಪುರ, ತುಮಟಿ ಗ್ರಾಮಗಳ ವ್ಯಾಪ್ತಿಯೊಳಗೆ ಅಕ್ರಮವಾಗಿ ಗಣಿಗಾರಿಕೆ ಮಾಡಿರುವುದು ನೆರೆಯ ಆಂಧ್ರ ಸರಕಾರ 2025 ಡಿಸೆಂಬರ್‌ತಿಂಗಳಲ್ಲಿ ನಡೆಸಿದ್ದ ಸೂಪರ್‌ಇಂಪೋಸ್ಡ್ ಸ್ಕೆಚ್‌ನಲ್ಲಿ ಸ್ಪಷ್ಟವಾಗಿದೆ. 1896ರ ಬಳ್ಳಾರಿ ಮೀಸಲು ಅರಣ್ಯ ನಕ್ಷೆಯ ಪ್ರಕಾರ ಸಂರಕ್ಷಿತ ಅರಣ್ಯವಾಗಿದ್ದ ಈ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿರುವ ಒಎಂಸಿ ಕಂಪೆನಿಯು ಅರಣ್ಯ ಕಾಯ್ದೆಯನ್ನು ಉಲ್ಲಂ ಸಿದೆ ಎಂದು ಆರೋಪಿಸಲಾಗಿದೆ. ಓಬಳಾಪುರಂ ಮೈನಿಂಗ್‌ ಕಂಪನಿ ಹಾಗೂ (ಎಂಬಿಟಿ, ಹಿಂದ್‌ ಟ್ರೇಡರ್ಸ್‌, ಎನ್‌.ರತ್ನಯ್ಯ) ಅದರ ಗುಂಪು ಕಂಪನಿಗಳಿಂದ 884 ಕೋ. ರೂ. ವಸೂಲಿ ಮಾಡಬೇಕು ಎಂದು ಗಣಿ ಉದ್ಯಮಿ ಟಪಾಲ್‌ ಗಣೇಶ್‌ ದೂರು ಸಲ್ಲಿಸಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Udayavani