Dailyhunt Logo
  • Light mode
    Follow system
    Dark mode
    • Play Story
    • App Story
ಜನನಾಯಗನ್‌ನಲ್ಲಿ ಮಿಂಚಿದ ವಜ್ರಾಂಗ್‌ ಶೆಟ್ಟಿ

ಜನನಾಯಗನ್‌ನಲ್ಲಿ ಮಿಂಚಿದ ವಜ್ರಾಂಗ್‌ ಶೆಟ್ಟಿ

ನ್ನಡ ಸಾಕಷ್ಟು ಸಿನಿಮಾಗಳಲ್ಲಿ ವಿವಿಧ ಪಾತ್ರ ನಿರ್ವಹಿಸಿರುವ ವಜ್ರಾಂಗ್‌ ಶೆಟ್ಟಿ (Vajrang Shetty) ಇತ್ತೀಚೆಗೆ ದಳಪತಿ ವಿಜಯ್‌ ಅಭಿನಯದ ಕೊನೆಯ ಚಿತ್ರದಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದಿದ್ದಾರೆ.

ಇತ್ತೀಚೆಗೆ ತೆರೆಕಂಡ ಜನನಾಯಗನ್‌ ಚಿತ್ರದಲ್ಲಿ ಬಾಬ್ಬಿ ಡಿಯೋಲ್‌ ಬಳಿಕ ಪ್ರಮುಖ ಖಳ ಪಾತ್ರದಲ್ಲಿ ಕನ್ನಡದ ವಜ್ರಾಂಗ್‌ ಶೆಟ್ಟಿ ನಟಿಸಿದ್ದರು.

ಜನನಾಯಗನ್‌ನಲ್ಲಿ ಇವರ ನಟನೆಗೆ ಕಾಲಿವುಡ್‌ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಜಯ್‌ ಮತ್ತು ವಜ್ರಾಂಗ್‌ ಜೋಡಿಯ ಮಾಸ್‌ ಫೈಟ್‌ ಮೂಲಕ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

ಮೂಲತಃ ಕುಂದಾಪುರದವರಾದ ಮಣಿ ಶೆಟ್ಟಿ, ಕನ್ನಡ ಸಿನಿಮಾರಂಗದಲ್ಲಿ ವಜ್ರಾಂಗ್‌ ಶೆಟ್ಟಿ ಎಂದೇ ಗುರುತಿಸಿಕೊಂಡಿದ್ದಾರೆ. ವಿನಯ್‌ ರಾಜ್‌ಕುಮಾರ್‌ ನಟನೆಯ ಚೊಚ್ಚಲ ಸಿನಿಮಾ "ಸಿದ್ದಾರ್ಥ' ಮೂಲಕ ಖಳನಾಯಕನಾಗಿ ಎಂಟ್ರಿ ಕೊಟ್ಟಿದ್ದ ವಜ್ರಾಂಗ್‌ ಶೆಟ್ಟಿ, ಆನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ.

ದರ್ಶನ್‌ ಜೊತೆ ರಾಬರ್ಟ್‌ ಚಿತ್ರದಲ್ಲಿ, ಪ್ರಭಾಸ್‌ ನಟನೆಯ ಸಲಾರ್‌ ಚಿತ್ರದಲ್ಲಿ ನಟಿಸಿದ್ದು, ಮಂತ್ರಂ ಹಾಗೂ ಬಬ್ಲುಷಾ ಎಂಬ ಚಿತ್ರಗಳಲ್ಲಿ ನಾಯಕನಾಗಿಯೂ ನಟಿಸಿದ ಅನುಭವವಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani