Dailyhunt Logo
  • Light mode
    Follow system
    Dark mode
    • Play Story
    • App Story
Jani Chacko Uthup: ಹೃದಯಸ್ತಂಭನದಿಂದ ಖ್ಯಾತ ಗಾಯಕಿ ಉಷಾ ಉತ್ತುಪ್‌ ಪತಿ ನಿಧನ

Jani Chacko Uthup: ಹೃದಯಸ್ತಂಭನದಿಂದ ಖ್ಯಾತ ಗಾಯಕಿ ಉಷಾ ಉತ್ತುಪ್‌ ಪತಿ ನಿಧನ

ಕೋಲ್ಕತ್ತಾ: ಖ್ಯಾತ ಗಾಯಕಿ, ಇಂಡಿಯನ್‌ ಪಾಪ್‌ ಐಕಾನ್‌ ಉಷಾ ಉತ್ತುಪ್‌(Usha Uthup) ಅವರ ಪತಿ ಹೃದಯಸ್ತಂಭನದಿಂದ (Cardiac arrest) ನಿಧನರಾಗಿದ್ದಾರೆ.

ಸೋಮವಾರ(ಜು.8ರಂದು) ಕೋಲ್ಕತ್ತಾದಲ್ಲಿ ಜಾನಿ ಚಾಕೋ ಉತ್ತುಪ್ (78) ನಿಧನ ಹೊಂದಿದ್ದಾರೆ. ತನ್ನ ನಿವಾಸದಲ್ಲಿ ಟಿವಿ ನೋಡುತ್ತಿರುವ ವೇಳೆ ಏಕಾಏಕಿ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆದರೆ ಆದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

ಹಠಾತ್ ಹೃದಯಸ್ತಂಭನದಿಂದ ಅವರು ನಿಧನ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.

ಉಷಾ ಅವರಿಗೆ ಜಾನಿ ಚಾಕೋ (Jani Chacko Uthup) ಎರಡನೇ ಪತಿ. 70 ದಶಕದಲ್ಲಿ ಉಷಾ ಮೊದಲ ಬಾರಿ ರೆಸ್ಟೋರೆಂಟ್‌ ವೊಂದರಲ್ಲಿ ಕಾರ್ಯಕ್ರಮದ ವೇಳೆ ಜಾನಿ ಅವರನ್ನು ಭೇಟಿ ಆಗಿದ್ದರು. ಉಷಾ ಈ ಹಿಂದೆ ರಾಮು ಅವರನ್ನು ಮದುವೆಯಾಗಿದ್ದರು.

ಉಷಾ - ಜಾನಿ ದಂಪತಿಗೆ ಸನ್ನಿ ಎಂಬ ಮಗ ಮತ್ತು ಅಂಜಲಿ ಎಂಬ ಮಗಳಿದ್ದಾರೆ.

ಮಂಗಳವಾರ (ಜು.9ರಂದು) ಜಾನಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಸಂಗೀತ ಲೋಕದಲ್ಲಿನ ಅಪಾರ ಸಾಧನೆಗಾಗಿ ಉಷಾ ಉತ್ತುಪ್‌ ಅವರಿಗೆ ಈ ವರ್ಷದ ಆರಂಭದಲ್ಲಿ ಪದ್ಮಭೂಷಣ ನೀಡಿ ಗೌರವಿಸಲಾಗಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Udayavani