Dailyhunt Logo
  • Light mode
    Follow system
    Dark mode
    • Play Story
    • App Story
ಜಿಡಿಪಿಯ ಪ್ರಾಮಾಣಿಕ ದರ ಬಿಡುಗಡೆ ಮಾಡಿ: ಕಾಂಗ್ರೆಸ್

ಜಿಡಿಪಿಯ ಪ್ರಾಮಾಣಿಕ ದರ ಬಿಡುಗಡೆ ಮಾಡಿ: ಕಾಂಗ್ರೆಸ್

ಹೊಸದಿಲ್ಲಿ: "ಸರಕಾರದ ಸಂಖ್ಯೆಗಳಲ್ಲಿ ಜಿಡಿಪಿ ದರ ಶೇ.7.8ರಷ್ಟಿದೆ. ಆದರೆ ನೈಜವಾಗಿ ಈ ಪ್ರಗತಿ ಕಾಣುತ್ತಿಲ್ಲ. ನೈಜ ಸಂಖ್ಯೆ ಬಿಡುಗಡೆ ಮಾಡಿದರೆ ಪ್ರಗತಿ ದರ ಕಡಿಮೆ ಇರಲಿದೆ' ಎಂದು ಕಾಂಗ್ರೆಸ್‌ ಹೇಳಿದೆ.

ಪ್ರಧಾನಿ ಮೋದಿ ವೀಡಿಯೋ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಜೈರಾಮ್‌ ರಮೇಶ್‌, "ಮೋದಿ ಸರಕಾರವು ಸಂಖ್ಯೆಗಳನ್ನು ಕುಶಲತೆಯಿಂದ ನಿರ್ವಹಣೆ ಮಾಡುತ್ತಿದೆ.

ಜಿಡಿಪಿಯನ್ನು ಲೆಕ್ಕಾಚಾರ ಮಾಡುವ ವಿಧಾನದಲ್ಲೇ ಬದಲಾವಣೆ ಮಾಡಿರುವುದರಿಂದ ಇಂತಹ ಪ್ರಗತಿ ಕಂಡುಬಂದಿದೆ' ಎಂದಿದ್ದಾರೆ. ದೇಶದಲ್ಲಿ ಸಗಟು ಹಣದುಬ್ಬರ ಪ್ರಮಾಣ ಶೇ.9ಕ್ಕಿಂತ ಹೆಚ್ಚಿದೆ. ಹೀಗಾಗಿ ಸಾಮಾನ್ಯರ ಬದುಕು ಕಷ್ಟದಲ್ಲಿ ಸಾಗುತ್ತಿದೆ. ಮೇಕ್‌ ಇನ್‌ ಇಂಡಿಯಾ ಶುರುವಾಗಿ 10 ವರ್ಷವಾದರೂ ಜಿಡಿಪಿಯಲ್ಲಿ ಇದರ ಪಾಲು ಶೇ.10ರಷ್ಟಿದೆ ಎಂದಿದ್ದಾರೆ.

ಲೈಟ್ಸ್‌ , ಕೆಮರಾ, ಇನ್‌ ಆಯಕ್ಷನ್
ಮೋದಿ ಅವರೇ ನೀವು ಜಿಡಿಪಿ ಪ್ರಗತಿಯನ್ನು ಹೊಗಳುತ್ತಿದ್ದೀರಿ. ಆದರೆ ನಿಮ್ಮ ಸರಕಾರ ಕೊಟ್ಟಿರುವ ನಿರು ದ್ಯೋಗ, ಬೆಲೆ ಏರಿಕೆ, ಅಸಮಾ ನತೆಯಿಂದ ಸಾಮಾನ್ಯ ಜನ ಬಳಲುತ್ತಿದ್ದಾರೆ. ಮೋದಿ ವೀಡಿಯೋ ಹೇಗಿದೆ ಎಂದರೆ ಲೈಟ್ಸ್‌, ಕೆಮರಾ, ಇನ್‌ ಆಯಕ್ಷನ್‌ ಎಂಬಂತಿದೆ.
-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಧ್ಯಕ್ಷ

Dailyhunt
Disclaimer: This content has not been generated, created or edited by Dailyhunt. Publisher: Udayavani