ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದಿಂದ 10 ಸಾವಿರ ಕೋಟಿ ರೂ. ಜಿಎಸ್‌ಟಿಯಿಂದ ಬರಬೇಕು ಎಂದು ಹೇಳಿರುವುದು ಸುಳ್ಳು. ಪ್ರತಿ ತಿಂಗಳು ಜಿಎಸ್‌ಟಿಯಿಂದ ರಾಜ್ಯಕ್ಕೆ ಬರುವುದು ಬರುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಎಸ್‌ಜಿಎಸ್‌ಟಿಯಿಂದ ಶೇ.50, ಸಿಜಿಎಸ್‌ಟಿಯಿಂದ ಶೇ.40 ಬರುತ್ತದೆ.
10 ಸಾವಿರ ಕೋಟಿ ಯಾವ ಬಾಬತ್ತಿನಲ್ಲಿ ಉಳಿದಿದೆ ಎಂಬ ವಿವರವನ್ನು ಸಿದ್ದರಾಮಯ್ಯ ಕೊಡಬೇಕು. ಮಾಹಿತಿ ನೀಡಿದರೆ ನ್ಯಾಯ ಸಮ್ಮತವಾಗಿ ರಾಜ್ಯಕ್ಕೆ ಬರುವ ಜಿಎಸ್‌ಟಿ ಹಣವನ್ನು ಪಡೆಯಲು ನಮ್ಮ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಜಿಎಸ್ ಟಿ ದರ ಇಳಿಕೆ ಮಾಡಿರುವುದರಲ್ಲಿ ಹಣ ಬರಬೇಕೆನ್ನುವುದು ಕಾಂಗ್ರೆಸ್ ನಿಲುವು ಇದ್ದರೆ, ವಸ್ತುಗಳ ಮೇಲಿನ ದರ ಕಡಿಮೆ ಮಾಡಬೇಕೆನ್ನುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿಲುವು. ಅದನ್ನು ಒಪ್ಪಿ ಕಾಂಗ್ರೆಸ್ ಜನರ ಪರ ಇದಿಯಾ ಅಥವಾ ಹೆಚ್ಚಿನ ದರದ ಪರ ಇದ್ದಾರ ಎನ್ನುವುದನ್ನು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಕೇಂದ್ರ ಸರ್ಕಾರ ಕೆಲವು ವಸ್ತುಗಳ ಮೇಲಿನ ಜಿಎಸ್ ಟಿ ದರವನ್ನು ಶೇ.18 ರಿಂದ ಶೇ. 5 ಕ್ಕೆ ಮತ್ತು ಶೇ 5 ರಿಂದ ಶೂನ್ಯಕ್ಕೆ ಇಳಿಸಿರುವುದನ್ನು ಮರೆತಿದ್ದಾರೆ. ಇದೆಲ್ಲ ಚುನಾವಣೆಯ ಸ್ಟಂಟ್. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು 2013 ರಿಂದ 2018 ರ ವರೆಗೆ ಮತ್ತು ಈಗಿನ ಅವಧಿಯಲ್ಲಿ ಒಟ್ಟು 5 ಲಕ್ಷ 55 ಸಾವಿರ ಕೋಟಿ ಸಾಲ ಮಾಡಿದ್ದು, ಅದು ಬಿಜೆಪಿಯದ್ದಲ್ಲಾ ಎಂದು ಸ್ಪಷ್ಟಪಡಿಸಿದ್ದಾರೆ.

