ಹೊಸದಿಲ್ಲಿ: ಜು.17ರಂದು ಹರಿಯಾಣದ ಜಿಂದ್ ರೈಲ್ವೇ ನಿಲ್ದಾಣದಿಂದ ದೇಶದ ಮೊದಲ ಹೈಡ್ರೋಜನ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಸುರು ನಿಶಾನೆ ತೋರಲಿದ್ದಾರೆ ಎಂದು ರೈಲ್ವೇ ಸಚಿವಾಲಯದ ಮೂಲಗಳು ಬುಧವಾರ ತಿಳಿಸಿವೆ.
2 ಡ್ರೈವಿಂಗ್ ಪವರ್ ಕಾರ್‌ಗಳು ಮತ್ತು 8 ಪ್ರಯಾಣಿಕ ಬೋಗಿಗಳನ್ನು ಹೊಂದಿರುವ ಈ ರೈಲು, ಜಿಂದ್-ಸೋನಿಪತ್ ನಡುವೆ ತಲಾ 89 ಕಿ.ಮೀ.ನ 2 ಟ್ರಿಪ್‌ಗ್ಳನ್ನು ಓಡಿಸುವ ಮೂಲಕ ಪ್ರತಿದಿನ ಒಟ್ಟು 356 ಕಿ.ಮೀ.
ದೂರ ಕ್ರಮಿಸಲಿದೆ. ಇದು 682 ಆಸನ ಹೊಂದಿದ್ದು, ಒಟ್ಟು 2,600 ಪ್ರಯಾಣಿಕರ ಸಾಮರ್ಥಯವನ್ನು ಹೊಂದಿದೆ. ಈ ರೈಲು 440 ಕೆ.ಜಿ. ಸಂಕುಚಿತ ಹೈಡ್ರೋಜನ್ ಅನ್ನು ಸಂಗ್ರಹಿಸಿಟ್ಟುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

