Dailyhunt Logo
  • Light mode
    Follow system
    Dark mode
    • Play Story
    • App Story
ಜು.20ರಿಂದ ಸಂಸತ್‌ ಕಲಾಪ: ಸರ್ಕಾರ ಪ್ರತಿಪಕ್ಷಗಳ ಜಟಾಪಟಿಗೆ ವೇದಿಕೆ ಸಜ್ಜು

ಜು.20ರಿಂದ ಸಂಸತ್‌ ಕಲಾಪ: ಸರ್ಕಾರ ಪ್ರತಿಪಕ್ಷಗಳ ಜಟಾಪಟಿಗೆ ವೇದಿಕೆ ಸಜ್ಜು

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20ರಿಂದ ಆಗಸ್ಟ್ 13ರವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ಹೇಳಿದ್ದಾರೆ.

ರಾಷ್ಟ್ರೀಯ ಪ್ರಾಮುಖ್ಯತೆಯ ಪ್ರಮುಖ ವಿಷಯಗಳ ಕುರಿತು ಅರ್ಥಪೂರ್ಣ ಚರ್ಚೆಗಳು, ಸಂವಾದಗಳು ಮತ್ತು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಉದ್ದೇಶದಿಂದ ಈ ಮುಂಗಾರು ಅಧಿವೇಶನ 2026ರ ಜುಲೈ 20ರಂದು ಪ್ರಾರಂಭವಾಗಿ ಆಗಸ್ಟ್ 13ರವರೆಗೆ ಮುಂದುವರಿಯಲಿದೆ ಎಂದು ಸಚಿವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಅಧಿವೇಶನದಲ್ಲಿ ಹಲವು ಪ್ರಮುಖ ಮಸೂದೆಗಳು ಮತ್ತು ದೇಶದ ಪ್ರಸ್ತುತ ವಿದ್ಯಮಾನಗಳ ಕುರಿತು ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ತೀವ್ರ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ. ಈ ಕಲಾಪದ ವೇಳೆ ಟಿಎಂಸಿಯ ಹಾಗೂ ಶಿವಸೇನೆ ಉದ್ಧವ್ ಬಣದ ಬಂಡಾಯ ಸಂಸದರನ್ನು ಪ್ರತ್ಯೇಕ ಪಕ್ಷ ಅಥವಾ ಬಣವೆಂದು ಸ್ಪೀಕರ್ ಬಿರ್ಲಾ ಪರಿಗಣಿಸುವುದು ಪಕ್ಕಾ ಎಂದು ಹೇಳಲಾಗುತ್ತಿದ.

ಕಳೆದ ಅಧಿವೇಶನದ ವೇಳೆ ಸೋಲುಂಡ ಮಹಿಳಾ ಮೀಸಲು ಹಾಗೂ ಡಿಲಿಮಿಟೇಷನ್‌ ಮಸೂದೆಯನ್ನು ಮಗದೊಮ್ಮೆ ಮಂಡಿಸುವುದು ಕೇಂದ್ರ ಸರ್ಕಾರದ ಪ್ರಮುಖ ಅಜೆಂಡಾದಲ್ಲಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಸರ್ಕಾರದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

Dailyhunt
Disclaimer: This content has not been generated, created or edited by Dailyhunt. Publisher: Udayavani