Dailyhunt Logo
  • Light mode
    Follow system
    Dark mode
    • Play Story
    • App Story
ಜುಲೈನಲ್ಲಿ 4.45% ಹಣದುಬ್ಬರ ದಾಖಲು: 19 ತಿಂಗಳ ಗರಿಷ್ಠ

ಜುಲೈನಲ್ಲಿ 4.45% ಹಣದುಬ್ಬರ ದಾಖಲು: 19 ತಿಂಗಳ ಗರಿಷ್ಠ

ವದೆಹಲಿ: ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಜುಲೈ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 4.45ಕ್ಕೆ ಏರಿಕೆಯಾಗಿದೆ.

ಇದು 19 ತಿಂಗಳ ಗರಿಷ್ಠವಾಗಿದೆ. 2024ರ ಡಿಸೆಂಬರ್‌ನಲ್ಲಿ ಶೇ.5.22ರಷ್ಟು ಹಣದುಬ್ಬರ ದಾಖಲಾಗಿತ್ತು. ಜೂನ್‌ ತಿಂಗಳಲ್ಲಿ ಇದು ಶೇ. 4.38 ರಷ್ಟಿತ್ತು.

ಬುಧವಾರ ಬಿಡುಗಡೆಯಾದ ಸರ್ಕಾರದ ಅಧಿಕೃತ ದತ್ತಾಂಶದ ಪ್ರಕಾರ, ಜುಲೈ ತಿಂಗಳಲ್ಲಿ ಆಹಾರ ಹಣದುಬ್ಬರವು ಶೇ.5.52ಕ್ಕೆ ಏರಿದೆ. ಜೂನ್‌ನಲ್ಲಿ ಅದು ಶೇ.5.32ರಷ್ಟಿತ್ತು. ಹಣದುಬ್ಬರದ ಹೆಚ್ಚಳವನ್ನು ಮನಗಂಡ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಈ ತಿಂಗಳ ಆರಂಭದಲ್ಲಿ ತನ್ನ ಅಲ್ಪಾವಧಿ ಸಾಲದ ಬಡ್ಡಿದರವನ್ನು ಬದಲಾಯಿಸದೆ ಹಾಗೆಯೇ ಉಳಿಸಿಕೊಂಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani