Dailyhunt Logo
  • Light mode
    Follow system
    Dark mode
    • Play Story
    • App Story
ಜೂನ್‌ನಲ್ಲಿ ದಾಖಲೆಯ 1.26 ಕೋಟಿ ತಿರುಪತಿ ಲಡ್ಡು ಮಾರಾಟ!

ಜೂನ್‌ನಲ್ಲಿ ದಾಖಲೆಯ 1.26 ಕೋಟಿ ತಿರುಪತಿ ಲಡ್ಡು ಮಾರಾಟ!

ತಿರುಪತಿ: ತಿರುಮಲ ತಿರುಪತಿ ದೇವಾಲಯವು ಈ ಜೂನ್‌ನಲ್ಲಿ 1.26 ಕೋಟಿ ಮೌಲ್ಯದ ಲಡ್ಡು ಮಾರಾಟ ಮಾಡುವ ಮೂಲಕ ಹೊಸ ದಾಖಲೆ ಮಾಡಿದೆ ಎಂದು ಟಿಟಿಡಿ ಶುಕ್ರವಾರ ತಿಳಿಸಿದೆ. ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಈ ಜೂನ್‌ನಲ್ಲಿ ಲಡ್ಡು ಮಾರಾಟ ಪ್ರಮಾಣ ಶೇ.6ರಷ್ಟು ಹೆಚ್ಚಳವಾಗಿದೆ.

ಅಲ್ಲದೇ ಕಳೆದ 3 ತಿಂಗಳಿಗೆ ಹೋಲಿಸಿದರೂ ಲಡ್ಡು ಮಾರಾಟ ಹೆಚ್ಚಳವಾಗಿದೆ. ಏಪ್ರಿಲ್‌ನಲ್ಲಿ 1.1 ಕೋಟಿ ಲಡ್ಡು, ಮೇನಲ್ಲಿ 1.2 ಕೋಟಿ ಲಡ್ಡು ಮಾರಾಟವಾಗಿದೆ. ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾದ ಕಾರಣ ಲಡ್ಡು ಉತ್ಪಾದನೆಯನ್ನೂ ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani