ನವದೆಹಲಿ: ರಕ್ಷಣಾ ಸ್ವಾಧೀನ ಮಂಡಳಿಯು ಸುಮಾರು 52,000 ಕೋಟಿ ರೂ. ಮೌಲ್ಯದ ಹಲವಾರು ಖರೀದಿ ಪ್ರಸ್ತಾವನೆಗಳಿಗೆ ತನ್ನ ಅಗತ್ಯತೆಯ ಒಪ್ಪಿಗೆಯನ್ನು ನೀಡಿದೆ. ಇದರಲ್ಲಿ ಡ್ರೋನ್ ನಾಶಗೊಳಿಸುವ ಉಪಕರಣಗಳು, ಕಣ್ಗಾವಲು ಉಪಕರಣಗಳನ್ನು ಆಧ್ಯತೆಗೊಳಿಸಲಾಗಿದೆ.
ಆಕಾಶ್ ತರಂಗ್ ಮಾನವರಹಿತ ವೈಮಾನಿಕ ವಾಹನ, ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆ, ಮಧ್ಯಮ ಶ್ರೇಣಿಯ ಕ್ಷಿಪಣಿ ವ್ಯವಸ್ಥೆ, ಕಡಿಮೆ ಶ್ರೇಣಿಯ ವಾಯು ರಕ್ಷಣಾ ವ್ಯವಸ್ಥೆ, ಕಾಮಿಕಾಜೆ ಡ್ರೋನ್ ವ್ಯವಸ್ಥೆ ಸೇರಿ ಇನ್ನೂ ಹಲವು ಉಪಕರಣಗಳ ಖರೀದಿಗೆ ಮಂಡಳಿಯು ಅಗತ್ಯತೆಯ ಒಪ್ಪಿಗೆ ನೀಡಿದೆ.
ರಕ್ಷಣಾ ಉಪಕರಣಗಳ ಖರೀದಿಯಲ್ಲಿ ಅಗತ್ಯತೆಯ ಒಪ್ಪಿಗೆಯು ಮೊದಲ ಹೆಜ್ಜೆಯಾಗಿದೆ.

