Dailyhunt Logo
  • Light mode
    Follow system
    Dark mode
    • Play Story
    • App Story
ಕಾಂಗ್ರೆಸ್ಸಿಗರಿಗೆ ರಾಮನ ಮೇಲೆ ಈಗ ಭಕ್ತಿ ಬಂದಿದೆ: ಸುಧಾಕರ್‌

ಕಾಂಗ್ರೆಸ್ಸಿಗರಿಗೆ ರಾಮನ ಮೇಲೆ ಈಗ ಭಕ್ತಿ ಬಂದಿದೆ: ಸುಧಾಕರ್‌

ಚಿಕ್ಕಬಳ್ಳಾಪುರ: ಅಯೋಧ್ಯೆ ರಾಮಮಂದಿರದಲ್ಲಿ ಹುಂಡಿ ಹಣದ ಕಳ್ಳತನ ದುರದೃಷ್ಟಕರ. ಇದರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಕ್ರಮ ವಹಿಸಲಿದೆ. ಆದರೆ ಮಂದಿರಕ್ಕೆ ಹೋಗದ ಕಾಂಗ್ರೆಸ್ ನಾಯಕರು ಈಗ ರಾಮನ ಮೇಲೆ ಭಕ್ತಿ ತೋರಿಸುತ್ತಿದ್ದಾರೆಂದು ಸಂಸದ ಡಾ. ಕೆ.ಸುಧಾಕರ್ ಟೀಕಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀರಾಮ ಕಾಲ್ಪನಿಕ ವ್ಯಕ್ತಿ ಎಂದು ಕೋರ್ಟ್‌ನಲ್ಲಿ ವಾದಿಸಲು ಮುಂದಾಗಿದ್ದ ಕಾಂಗ್ರೆಸ್, ಇದೀಗ ಆರೆಸ್ಸೆಸ್ ಹಾಗೂ ಬಿಜೆಪಿ ವಿರುದ್ಧ ಆರೋಪಿಸುತ್ತಿದೆ ಎಂದು ಕಿಡಿಕಾರಿದರು. ಹುಂಡಿ ಹಣ ಕಳ್ಳತನ ಮಾಡಿದವರ ವಿರುದ್ಧ ಕಠಿಣ ಕ್ರಮ ವಹಿಸಬೇಕೇ ಹೊರತು ರಾಜಕೀಯ ಮಾಡಬಾರದು ಎಂದರು.

Dailyhunt
Disclaimer: This content has not been generated, created or edited by Dailyhunt. Publisher: Udayavani