ಬೆಂಗಳೂರು: ಸಿವಿಲ್ ಪೊಲೀಸ್ ಕಾನ್ ಸ್ಟೆಬಲ್‌ಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಲು ಕಾಲಾವಕಾಶವನ್ನು ಜು.8ರ ಸಂಜೆ 4ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಅರ್ಜಿ ತಿದ್ದುಪಡಿಗೆ ಜು. 10ರಿಂದ 13ರವರೆಗೆ ಸಮಯ ನೀಡಲಾಗುವುದು. ಈ ಮುನ್ನ ಅರ್ಜಿ ಸಲ್ಲಿಸಲು ಜು. 3, ಶುಲ್ಕ ಪಾವತಿಸಲು ಜು. 4 ಕಡೆಯ ದಿನಾಂಕ ಎಂದು ನಿಗದಿಗೊಳಿಸಲಾಗಿತ್ತು.

