Dailyhunt
ಕಾರಿನ ಗಾಜು ಒಡೆದು 7 ಲಕ್ಷ ದರೋಡೆ

ಕಾರಿನ ಗಾಜು ಒಡೆದು 7 ಲಕ್ಷ ದರೋಡೆ

ಮಂಡ್ಯ : ಕೆ.ಆರ್.ಪೇಟೆ ಪಟ್ಟಣದ ಮುತ್ತುರಾಯಸ್ವಾಮಿ ಬಡಾವಣೆಯ ನಿವಾಸಿ ನಿವೃತ್ತ ಮುಖ್ಯ ಶಿಕ್ಷಕ ನಾಯಸಿಂಗನಹಳ್ಳಿ ನಾಗರಾಜು ಅವರ ಕಾರಿನಲ್ಲಿದ್ದ 7 ಲಕ್ಷ ರೂ. ಹಣವನ್ನು ದುಷ್ಕರ್ಮಿಗಳು ಕಾರಿನ ಗಾಜು ಒಡೆದು ದರೋಡೆ ಮಾಡಿರುವ ಘಟನೆ ಗುರುವಾರ ನಡೆದಿದೆ.

ಇದನ್ನೂ ಓದಿ : ಸ್ವತಂತ್ರವಾಗಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ಗುರಿ: ಕುಮಾರಸ್ವಾಮಿ

ಕೆ.ಆರ್. ಪೇಟೆ ಪಟ್ಟಣದ ಮುತ್ತುರಾಯಸ್ವಾಮಿ ಬಡಾವಣೆಯ ನಿವಾಸಿ ನಿವೃತ್ತ ಮುಖ್ಯ ಶಿಕ್ಷಕ ನಾಯಸಿಂಗನಹಳ್ಳಿ ನಾಗರಾಜು ಕೆನರಾ ಬ್ಯಾಂಕ್ ಶಾಖೆಯಲ್ಲಿ 7 ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು ಕಾರಿನಲ್ಲಿ ತಮ್ಮ ಮನೆಯ ಮುಂಭಾಗ ಕಾರನ್ನು ನಿಲ್ಲಿಸಿ ಮನೆಯ ಒಳಗೆ ತಮ್ಮ ಪತ್ನಿಯನ್ನು ಕರೆದುಕೊಂಡು ಬರಲು ತೆರಳಿದ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ನಾಗರಾಜು ಬ್ಯಾಂಕಿನಲ್ಲಿ ಹಣವನ್ನು ಡ್ರಾ ಮಾಡಿ ಕಾರಿನಲ್ಲಿ ಇಟ್ಟಿರುವುದನ್ನು ಗಮನಿಸಿ ನಾಗರಾಜುರನ್ನು ಹಿಂಬಾಲಿಸಿಕೊಂಡು ಬಂದು ಕಾರಿನ ಗ್ಲಾಸ್ ಒಡೆದು ಹಣವನ್ನು ಕದ್ದೊಯ್ದಿದ್ದಾರೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಘಟನೆಯ ಬಗ್ಗೆ ನಿವೃತ್ತ ಶಿಕ್ಷಕ ನಾಗರಾಜು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : ಕ್ರೈಸ್ತ ಉದ್ಯಮಿ ಕಟ್ಟಿಸಿದ ವಿನಾಯಕ ದೇಗುಲ ಸಮಾಜಕ್ಕೆ ಸಿದ್ಧಿಯನ್ನು ನೀಡಲಿ: ಪಲಿಮಾರು ಶ್ರೀ

Dailyhunt
Disclaimer: This content has not been generated, created or edited by Dailyhunt. Publisher: Udayavani