Dailyhunt Logo
  • Light mode
    Follow system
    Dark mode
    • Play Story
    • App Story
ಕಾರು ಕಂಪನಿಗಳಿಗೆ ಭರ್ಜರಿ ಮೈಲೇಜ್‌ ಟಾರ್ಗೆಟ್‌

ಕಾರು ಕಂಪನಿಗಳಿಗೆ ಭರ್ಜರಿ ಮೈಲೇಜ್‌ ಟಾರ್ಗೆಟ್‌

ನವದೆಹಲಿ: ಪ್ರಯಾಣಿಕ ವಾಹನಗಳ ಇಂಧನ ದಕ್ಷತೆ ಮತ್ತು ಇಂಗಾಲ ಹೊರಸೂಸುವಿಕೆಯ ಮೇಲೆ ಮಿತಿ ಹೇರುವ ಕಾರ್ಪೊರೇಟ್ ಆವರೇಜ್ ಫ್ಯೂಯಲ್ ಎಕಾನಮಿ (ಸಿಎಎಫ್‌ಇ-3) ನಿಯಮಗಳನ್ನು ಜಾರಿಗೆ ತಂದಿದ್ದು, 2032ರ ವೇಳೆಗೆ ಕಂಪನಿಯ ಕಾರುಗಳ ಸರಾಸರಿ ಮೈಲೇಜ್ ಪ್ರತಿ ಲೀಟರ್‌ ಪೆಟ್ರೋಲ್‌ಗೆ 30.12ರಷ್ಟಿರಬೇಕು ಎಂದು ಸೂಚಿಸಿದೆ.

ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌ಯುವಿ, ಎಂಪಿವಿ ಮತ್ತು 8 ಸೀಟು ಸಾಮರ್ಥ್ಯದ ವಾಹನಗಳಿಗೆ ಈ ನಿಯಮಗಳು ಅನ್ವಯವಾಗಲಿದ್ದು, 2027ರ ಜನವರಿ 1ರಿಂದಲೇ ಜಾರಿಯಾಗಲಿದೆ. ಪ್ರತಿ ವರ್ಷವೂ ಮೈಲೇಜ್‌ ಪ್ರಮಾಣವನ್ನು ಏರಿಕೆ ಮಾಡಲಾಗುವುದು ಎಂದು ತಿಳಿಸಿದೆ. ಪ್ರಸ್ತುತ ಕಾರುಗಳಿಗೆ 25.6 ಕಿ.ಮೀ/ಲೀ. ಮೈಲೇಜ್‌ ನಿಗದಿಪಡಿಸಲಾಗಿದೆ.

ಹೊಸ ನಿಯಮಗಳು ತಂತ್ರಜ್ಞಾನ ವಿಷಯದಲ್ಲಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸಲಿವೆ. ವಾಹನಗಳ ತೂಕದ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಭಾರವಾದ ವಾಹನಗಳಿಗೆ ಹೆಚ್ಚಿನ ಇಂಧನ ದಕ್ಷತೆಯ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಕಾರ್ಪೊರೇಟ್ ಆವರೇಜ್ ಫ್ಯೂಯಲ್ ಎಕಾನಮಿ (ಸಿಎಎಫ್‌ಇ-3) ಎಂಬುದು ವಾಹನಗಳ ತಯಾರಿಕೆ ನಿಯಂತ್ರಣ ಮಾನದಂಡವಾಗಿದೆ. ವಾಹನ ತಯಾರಕರು, ಸರಾಸರಿ ಇಂಧನ ದಕ್ಷತೆ ಮತ್ತು ಇಂಗಾಲ ಹೊರಸೂಸುವಿಕೆಯ ನಿಯಮಗಳನ್ನು ಪೂರೈಸಬೇಕೆಂಬುದನ್ನು ಕಡ್ಡಾಯಗೊಳಿಸುತ್ತದೆ.

1 ಇ.ವಿ. 3 ಪೆಟ್ರೋಲ್ ಕಾರುಗಳಿಗೆ ಸಮ!

ಹೊಸ ನಿಯಮದ ಪ್ರಕಾರ 1 ಎಲೆಕ್ಟ್ರಿಕ್ ಕಾರನ್ನು 3 ಪೆಟ್ರೋಲ್‌ ಕಾರಿಗೆ ಸಮ ಎಂದು ನಿರ್ಧರಿಸಲಾಗುತ್ತದೆ. ಮೈಲೇಜ್‌ ಲೆಕ್ಕ ಮಾಡುವ ಸಮಯದಲ್ಲಿ ಕಂಪನಿಯ ಎಲ್ಲಾ ವಾಹನಗಳ ಸರಾಸರಿ ಲೆಕ್ಕ ಮಾಡುವುದರಿಂದ ಇ.ವಿ.ಗಳನ್ನು ಹೆಚ್ಚು ತಯಾರು ಮಾಡಿದರೆ ಈ ಮಾನದಂಡವನ್ನು ಪೂರೈಸುವುದು ಸುಲಭವಾಗಲಿದೆ. ಹೀಗಾಗಿಯೇ ಇ.ವಿ. ಕಾರುಗಳಿಗೆ ಹೆಚ್ಚು ಅವಕಾಶ ಒದಗಿಸಲು ಹೊಸ ಕಾನೂನನ್ನು ಜಾರಿಮಾಡಲಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

Dailyhunt
Disclaimer: This content has not been generated, created or edited by Dailyhunt. Publisher: Udayavani