Dailyhunt
ಕದನ ವಿರಾಮ ಬಳಿಕ ಹೊತ್ತಿ ಉರಿದ ಇರಾನ್‌ನ ಲಾವನ್ ತೈಲ ಸಂಸ್ಕರಣಾಗಾರ!

ಕದನ ವಿರಾಮ ಬಳಿಕ ಹೊತ್ತಿ ಉರಿದ ಇರಾನ್‌ನ ಲಾವನ್ ತೈಲ ಸಂಸ್ಕರಣಾಗಾರ!

ದುಬೈ: ಇರಾನ್ ಮತ್ತು ಅಮೆರಿಕ 2 ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ಬಳಿಕವೂ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿದ್ದು ದಾಳಿಗೆ ಪ್ರತಿದಾಳಿಗಳು ನಡೆಯುತ್ತಿವೆ.

ಇರಾನ್‌ನ ಲಾವನ್ ದ್ವೀಪದಲ್ಲಿರುವ ಲಾವನ್ ತೈಲ ಸಂಸ್ಕರಣಾಗಾರದ ಮೇಲೆ ದಾಳಿ ನಡೆದಿದ್ದು ಭಾರೀ ಬೆಂಕಿ ಕಾಣಿಸಿಕೊಂಡಿದೆ.

ದಾಳಿಯನ್ನು ಯುಎಇ ನಡೆಸಿದೆ ಎಂದು ಆರೋಪಿಸಲಾಗಿದೆ. ಇನ್ನೊಂದೆಡೆ ಹೇಡಿಗಳು ದಾಳಿ ನಡೆಸಿದೆ ಎಂದು ಇರಾನ್ ಆಕ್ರೋಶ ಹೊರ ಹಾಕಿದೆ.

ಪ್ರತಿಕಾರವಾಗಿ ಯುಎಇ ಹಾಗೂ ಕುವೈತ್‌ ಗುರಿಯಾಗಿಸಿ ಇರಾನ್ ಕೂಡ ಕ್ಷಿಪಣಿ ಮತ್ತು ಡ್ರೋನ್‌ ದಾಳಿ ನಡೆಸಿದೆ. ಅಬುಧಾಬಿಯ ಅನಿಲ ಸಂಸ್ಕರಣಾ ಘಟಕ ಗುರಿಯಾಗಿದ್ದು ಬೆಂಕಿಗೆ ಆಹುತಿಯಾಗಿದೆ.

ಇಸ್ರೇಲ್‌ನಲ್ಗೂ ಕ್ಷಿಪಣಿ ದಾಳಿಯ ಎಚ್ಚರಿಕೆಗಳು ಮೊಳಗಿರುವ ಬಗ್ಗೆ ವರದಿಯಾಗಿದೆ. ಸೌದಿ ಅರೇಬಿಯಾ ಮತ್ತು ಬಹ್ರೇನ್‌ನಲ್ಲಿಯೂ ಬುಧವಾರ ಬೆಳಗ್ಗೆ ಕ್ಷಿಪಣಿ ಎಚ್ಚರಿಕೆಗಳು ಕೇಳಿಬಂದಿದೆ. ಲೆಬನಾನ್‌ನ ಬೈರೂತ್‌ ಮೇಲೆ ಇಸ್ರೇಲ್‌ ದಾಳಿ ಮುಂದುವರಿಸಿದ್ದು ಸಾವು ನೋವುಗಳು ಸಂಭವಿಸಿದೆ.

ಕದನ ವಿರಾಮ ಘೋಷಣೆಗಳ ಬಳಿಕವೂ ದಾಳಿಗಳು ನಡೆಸಯುತ್ತಿರುವುದು ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani