Dailyhunt Logo
  • Light mode
    Follow system
    Dark mode
    • Play Story
    • App Story
Kala Sampada: ಅಮ್ಮನಿಗೊಂದು ನಾದ ನಮನ

Kala Sampada: ಅಮ್ಮನಿಗೊಂದು ನಾದ ನಮನ

ರ್ಕಳದ 'ಸರಿಗಮ ಭಾರತಿ' ಸಂಗೀತ ವಿದ್ಯಾ ಲಯದ ಸಭಾಂಗಣದಲ್ಲಿ ಆಗಸ್ಟ್‌ 1 ರಂದು ಒಂದು ಉನ್ನತ ಮಟ್ಟದ ಸಂಗೀತ ಕಛೇರಿ ನಡೆಯಿತು. ಅಂದು ವಿದ್ಯಾಲಯದ ನಿರ್ದೇಶಕಿ ಉಮಾಶಂಕರಿ ಅವರು, ಇತ್ತೀಚೆಗೆ ತಮ್ಮನ್ನು ಅಗಲಿದ ತಮ್ಮ ತಾಯಿ ಪ್ರೇಮ ಕೆ. ಭಟ್‌, ತೊಟ್ಟಿತ್ತೋಡಿ ಅವರ ಪುಣ್ಯ ಸ್ಮರಣೆಯಲ್ಲಿ "ನಾದ ನಮನ' ವನ್ನು ಏರ್ಪಡಿಸಿದ್ದರು.

ಈ ಕಾರ್ಯಕ್ರಮದ ಪೂರ್ವದಲ್ಲಿ ಪ್ರೇಮ ಕೆ. ಭಟ್‌ ಅವರ ಪುತ್ರಿ, ಕವಿಯತ್ರಿ ಪ್ರಮೀಳಾ ಚುಳ್ಳಿಕ್ಕಾನ ಅವರು ತಾಯಿಯ ನೆನಪಿನಲ್ಲಿ ರಚಿಸಿದ ಎರಡು ಕವನಗಳನ್ನು ಗಾಯಕಿ ಸಂಗೀತ ಬಾಲಚಂದ್ರ ಅವರು ಭಾವಪೂರ್ಣವಾಗಿ ಹಾಡಿದರು.

ಅಂದಿನ ಪ್ರಧಾನ ಕಾರ್ಯಕ್ರಮವಾದ ಗಾತ್ರ ಕಛೇರಿಯನ್ನು ನಡೆಸಿಕೊಟ್ಟವರು ಪ್ರಸಿದ್ಧ ವಯಲಿನ್‌ ಕಲಾವಿದೆ ವಿ| ಚಾರುಲತಾ ರಾಮಾನುಜಂ. ಪಿಟೀಲಿ ನಲ್ಲಿ ಸೋಲೋ ವಾದಕಿ, ಸಹವಾದಕಿ ಮತ್ತು ಗಾಯಕಿ ಯಾಗಿ ಗಾಢವಾದ ಅನುಭವ ಇವರದ್ದು. ಗುರು ಪರಂಪರೆಯಿಂದ ಪಡೆದ ಜ್ಞಾನವನ್ನು ಕಾದುಕೊಂಡು ಶುದ್ಧ ಸಂಗೀತವನ್ನು ನೀಡುವ ಪ್ರಾಮಾಣಿಕ ಪ್ರಯತ್ನ ! ನಿರಂತರ ಸಾಧನೆ, ಅಧ್ಯಯನ! ಯಾವುದೇ ಪ್ರಸ್ತುತಿ ಯಾದರೂ ರಾಗದ ನಿಜ ಲಕ್ಷಣಗಳಿಗೆ, ಸಾಹಿತ್ಯದ ಭಾವಾರ್ಥಕ್ಕೆ ಪ್ರಾಧಾನ್ಯ ನೀಡಲಾಗಿ, ಗಡಿಬಿಡಿ, ಗದ್ದಲಕ್ಕೆ ಎಡೆ ಇಲ್ಲದ ಸೌಖ್ಯ ಸಂಗೀತ! ತುಸುವೇ ಘನ ವಾದ ಶಾರೀರ, ಪ್ರಪ್ರಥಮವಾಗಿ ಹಾಡಲಾದ ರಾಮ ಪ್ರಿಯ ವರ್ಣದೊಂದಿಗೆ ಹಿತವಾಗಿ ತೆರೆದುಕೊಂಡಿತು.

ಜಗನ್ಮೋಹಿನಿ (ಶೋಭಿಲ್ಲು) ಶ್ರೀರಂಜನಿ (ಬ್ರೋಚೆ ವಾರೆವರೇ) ಇವು ಪರಿಚಿತ ಕೃತಿಗಳೇ ಆಗಿದ್ದರೂ ಹಂತಹಂತವಾಗಿ ಅರಳಿಕೊಂಡ ಸಂಗತಿಗಳಿಂದಾಗಿ ಸಭಿಕರಿಗೆ ಸಂತಸ ನೀಡಿದವು. ಮಲಯ ಮಾರುತ (ಸ್ಮರಣೆಯೊಂದೇ), ಕಾಪಿ ನಾರಾಯಣಿ (ಸರಸ ಸಾಮದಾನ) ಕ್ಷಿಪ್ರವಾದ ಸ್ವರ ವಿನಿಕೆಗಳಿಂದ ಕೂಡಿದ್ದವು.

ಪ್ರಧಾನ ರಾಗ ಎನಿಸಿದ್ದ ಕಲ್ಯಾಣಿ (ಅಮ್ಮ ರಾವಮ್ಮ) ಇಡೀ ಕಚೇರಿಗೆ ಹೊಸ ಕಳೆಯನ್ನು ನೀಡಿ ವಿಜೃಂಭಿಸಿತು. ಏನೇನೂ ಅವಸರವಿಲ್ಲದ ವಿಶ್ರಾಂತಿ; ರಾಗದ ಪ್ರತಿಯೊಂದು ಸ್ವರದಲ್ಲೂ ಸುದೀರ್ಘ‌ವಾಗಿ ನಿಲ್ಲುವ ಶ್ರುತಿ ಲೀನತೆ ಮತ್ತು ಕೇಳುಗರಿಗೆ ಸಂತಸ ನೀಡುವ ರೀತಿಯಲ್ಲಿ ಸಣ್ಣ ಸಣ್ಣ ಸಂಚಾರ ಖಂಡಗಳಿಂದ ರಾಗ ಸೌಂದರ್ಯವನ್ನು ತೆರೆದಿಟ್ಟ ಪರಿ ಅನನ್ಯ ! ಉತ್ತಮವಾದ ನೆರವಲ್‌ ಅನಂತರ ಸ್ವರವಿನಿಕೆಗಳು ಇರಲಿಲ್ಲ, ಆದರೆ ಅದೇ ಔಚಿತ್ಯ ಪೂರ್ಣ ಎನಿಸಿದ್ದು ವಿಶೇಷ! ಗಾಯಕಿಯ ಸಂಸ್ಕಾರ ಯುತ ಧ್ವನಿಯ ಏರಿಳಿತಗಳು ಮೌನವಾಗಿ ಆಲಿಸುತ್ತಿದ್ದ ರಸಿಕರ ಮನವನ್ನು ಮುಟ್ಟಿವೆ.

ರಾಗಂ -ತಾನಂ-ಪಲ್ಲವಿಗಾಗಿ ಬಿಲಹರಿ ರಾಗವನ್ನು ಎತ್ತಿಕೊಳ್ಳಲಾಯಿತು. ಸ್ವತಃ ಆನಂದದ ರಾಗ; ಕೈಶಿಕಿ ನಿಷಾದ ಇಲ್ಲದ 'ಬಿಲಹರಿ'ಯಲ್ಲಿ ಸರಳವಾದ ಆದರೆ ಪ್ರಭಾವಶಾಲಿಯಾದ ಆಲಾಪನೆ! ಅನಂತರ ನಿರೂ ಪಿಸಲಾದ ತಾನಂ ಸಭಿಕರನ್ನು ಸಂಮೋಹನ ಗೊಳಿಸಿದ್ದು ನಿಜ ! ಖಂಡ ತ್ರಿಪುಟ ತಾಳ, ಅತೀತ ಎಡುಪಿನಲ್ಲಿ ಶಂಕ/ರಿ .... ಉಮಾಶಂಕರಿ . ನನು ಬ್ರೋವುಮಾ ಶಂಕ/ರಿ . . . . ದಯಜೂಡು ಮಾ . .ಶಂಕ // ರಿ .. ಎಂಬ ಪಲ್ಲವಿಯನ್ನು ಮೂರು ಕಾಲಗಳಲ್ಲಿ ಅಂದವಾಗಿ ಪ್ರಸ್ತುತ ಪಡಿಸಿದ ಕಲಾವಿದೆ ರಸಿಕರ ಮುಕ್ತ ಪ್ರಶಂಸೆಯನ್ನು ಪಡೆದರು.

ಪಿಟೀಲಿನಲ್ಲಿ ಸಹಕರಿಸಿದ ಸಿಂಧು ಸುಚೇತನ್‌ ಹದವಾದ, ಪ್ರಬುದ್ಧವಾದ ಬಿಲ್ಲುಗಾರಿಕೆಯನ್ನು ತೋರಿ ರಸಿಕರಿಂದ ಸೈ ಎನಿಸಿಕೊಂಡರು. ಗಾಯ ನದ ಓಘಕ್ಕೆ ಅನುಗುಣವಾಗಿ ಲಯಗಾರಿಕೆ ಯನ್ನು ತೋರಿದ ವಿ| ಅರ್ಜುನ್‌ ಕುಮಾರ್‌ ಈ ಮೇಲಿನ ಪಲ್ಲವಿಯನ್ನು ಕೂಡ ಮೃದಂಗದಲ್ಲಿ ನುಡಿಸಿ ಶ್ರೋತೃ ಗಳನ್ನು ಬೆರಗುಗೊಳಿಸಿದರು.

ಯಮುನಾ ಕಲ್ಯಾಣಿಯ "ನಂದ ತನಯ' ದೇವರ ನಾಮದ ಅನಂತರ ಸುಮಾರು 10 ನಿಮಿಷಗಳ ಕಾಲ ಸಭಿಕರನ್ನು ಒಳ ಗೊಂಡಂತೆ "ನಾಮ ಸಂಕೀರ್ತನ' ಮಾಡಿದ ಗಾಯಕಿ ಕಛೇರಿಯನ್ನು ಸಂಪನ್ನಗೊಳಿಸಿದರು. ಎಷ್ಟೇ ಹೆಸರಾಂತ ಕಲಾವಿದರಾಗಿರಲಿ, ಕಚೇರಿಯ ಕೊನೆಯಲ್ಲಿ ನಿರ್ಭಾ ವುಕರಾಗಿ 'ಪವಮಾನ' ಹಾಡಿ ನಿರ್ಗಮಿಸುವುದರ ಬದಲು ಬರೀ ಐದು ನಿಮಿಷವಾದರೂ ರಸಿಕರನ್ನು ಒಳಗೊಂಡಂತೆ ನಾಮ ಸಂಕೀರ್ತನ ಮಾಡುವುದರಿಂದ ಕಛೇರಿಗೆ ಪರಿಪೂರ್ಣತೆಯನ್ನು ತಂದುಕೊಟ್ಟರು.

- l ವಿ| ಸರೋಜಾ ಆರ್‌. ಆಚಾರ್ಯ

Dailyhunt
Disclaimer: This content has not been generated, created or edited by Dailyhunt. Publisher: Udayavani