ಕಲಬುರಗಿ: ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಚುನಾವಣೆ ಆಯೋಗ ಲಾಜಿಕಲ್ ಡಸ್ಕ್ರಪನ್ಸಿ (logical discrepancy) ಪದವನ್ನು ಬಳಕೆ ಮಾಡುತ್ತದೆ. ನಿಜವಾಗಲೂ ಈ ಪದದ ಅರ್ಥವನ್ನು ಚುನಾವಣೆ ಆಯೋಗದ ಅಧಿಕಾರಿಗಳು ಹೇಳಿದರೆ ನಾನು ನನ್ನ ಸಚಿವ ಹುದ್ದೆಗೆ ರಾಜೀನಾಮೆ ಕೊಡಲೂ ಸಿದ್ದ ಎಂದು ರಾಜ್ಯದ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜು.5ರ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರೆ... ಅರ್ಜಿ ತುಂಬುವಾಗ, ಹೆಸರಿನಲ್ಲಿ ಒಂದು ಅಕ್ಷರ ತಪ್ಪಾದರೂ ಅದನ್ನು ಡಿಲಿಟ್ ಮಾಡ್ತಾರಂತೆ. ಅದನ್ನು ಸರಿ ಮಾಡಿಕೊಳ್ಳಲು ನಾವು ಕೋರ್ಟಿಗೆ ಹೋಗಬೇಕಂತೆ, ಇದೆಲ್ಲವೂ ಏನು ಎಂದು ಪ್ರಶ್ನಿಸಿ, ಚುನಾವಣೆ ಆಯೋಗದ ಕ್ರಮ ಖಂಡಿಸಿದರು.
ಇಷ್ಟು ದಿನ ಬಿಜೆಪಿಯವರು, ಓಟು ಚೋರಿ ಮಾಡುತ್ತಿದ್ದರು. ಈಗ ಚಂದಾ ಚೋರಿ ಮಾಡಲು ಶುರುವಿಟ್ಟಿದ್ದಾರೆ. ನಿಜಕ್ಕೂ ನಾಚಿಕೆ ಏನಾದರೂ ಇಲ್ಲವೇ, ನಮ್ಮ ಕಲಬುರಗಿಯ ಆಳಂದ ಸೇರಿದಂತೆ ದೇಶದ ಹಲವೆಡೆಗಳಲ್ಲಿ ವೋಟ್ ಚೋರಿ ಮಾಡಿದ್ದಲ್ಲದೆ, ಈಗೇನು ನಡೆಯುತ್ತಿದೆ ಎಂದು ಪ್ರಶ್ನಿಸಿದರು.
ಇನ್ನೊಂದು ಅಚ್ಚರಿ ಎಂದರೆ, ದೇವರ ಹೆಸರಿನಲ್ಲಿ ದೋಚುವ ವ್ಯಕ್ತಿಗಳಿಗೆಲ್ಲಾ ಗೌರವವಾದ 'ಜೀ' ಪದ ಬಳಕೆ. ಚಂಪಕಜೀ, ಗೋಪಾಜಿ, ಗಣೇಶಜೀ ಅಂತೆ... ಏನು ಮಾಡುತ್ತಿದ್ದಾರೆ ಬಿಜೆಪಿಯವರು ಎಂದು ಪ್ರಶ್ನಿಸಿದರು.

