Dailyhunt
ಕರಾವಳಿಯಲ್ಲಿ ಮುಂಜಾನೆ ಆವರಿಸಿದ ದಟ್ಟ ಮಂಜು! ಸೂರ್ಯನ ಕಿರಣಕ್ಕೆ ಮಂಜಿನ ತಡೆ

ಕರಾವಳಿಯಲ್ಲಿ ಮುಂಜಾನೆ ಆವರಿಸಿದ ದಟ್ಟ ಮಂಜು! ಸೂರ್ಯನ ಕಿರಣಕ್ಕೆ ಮಂಜಿನ ತಡೆ

ಕಾರ್ಕಳ: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಮುಂಜಾನೆ ದಟ್ಟ ಮಂಜು ಆವರಿಸುತ್ತಿದೆ. ಅದರಲ್ಲೂ ಇಂದು ಹೆಚ್ಚೇ ಎನ್ನುವಷ್ಷು ಮಂಜು ಆವರಿಸಿತ್ತು.

ಉಡುಪಿ ಜಿಲ್ಲೆಯ ಕಾರ್ಕಳ ನಗರದಾದ್ಯಂತ ಗುರುವಾರ ಮುಂಜಾನೆ ದಟ್ಟ ಮಂಜು ಆವರಿಸಿತ್ತು. ಇದರಿಂದಾಗಿ ಕಾರ್ಕಳ ಮಂಜಿನ ನಗರಿಯಾಗಿತ್ತು!

ಸಿಮ್‌ ಹ್ಯಾಕ್‌ : ಮಣಿಪಾಲದವರ ನಂಬರ್‌ ಬಿಹಾರದವರಿಗೆ ! ದೂರವಾಣಿ ಸಂಸ್ಥೆಗೆ ಪೊಲೀಸರ ನೋಟಿಸ್‌

ಸಮೀಪದಲ್ಲಿ ಇರುವವರೂ ಕಾಣಿಸದಷ್ಟು ರೀತಿಯಲ್ಲಿ ಮಂಜು ಸುರಿಯುತ್ತಿತ್ತು. ಇದರಿಂದಾಗಿ ಬೆಳಗ್ಗೆ ಎಂಟು ಗಂಟೆಯಾದರೂ ವಾಹನಗಳು ದೀಪ ಹಾಕಿಕೊಂಡು ಸಂಚರಿಸುತ್ತಿದ್ದುದು ಕಂಡು ಬಂತು. ತುಸು ಚಳಿಯ ವಾತಾವರಣ ಸೃಷ್ಟಿಯಾಗಿತ್ತು.

ಕಂಬಳ ಕರೆಗೆ ಇಳಿದ ಬಾಲಕಿ : ಆರನೇ ತರಗತಿ ವಿದ್ಯಾರ್ಥಿನಿ ಚೈತ್ರಾಳ ಚಿತ್ತ ಕಂಬಳದತ್ತ!

ಮೋಡಗಳ ಮರೆಯಿಂದ ಮಂಜನ್ನು ಸೀಳಿಕೊಂಡು ಹೊರಬರಲು ಸೂರ್ಯನ ಕಿರಣಗಳು ತವಕಿಸುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಾಣಸಿಕ್ಕವು.

ಇದು ನೋಡುಗರಿಗೆ ಮುದ ನೀಡಿತು. ಕ್ಯಾಮರದಲ್ಲಿ ಕೆಲವರು ಈ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Udayavani