Dailyhunt
ಕರೆ ಮಾಡಿದ್ರೆ ಮನೆ ಬಾಗಿಲಿಗೆ "ಆಕ್ಸಿಜನ್‌ ಸಮೇತ ಆಂಬ್ಯುಲೆನ್ಸ್‌"

ಕರೆ ಮಾಡಿದ್ರೆ ಮನೆ ಬಾಗಿಲಿಗೆ "ಆಕ್ಸಿಜನ್‌ ಸಮೇತ ಆಂಬ್ಯುಲೆನ್ಸ್‌"

ಬೀಳಗಿ: ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ತಾಲೂಕಿನ ಗಲಗಲಿ ಗ್ರಾಮದ ಯುವ ನಾಯಕ ಆನಂದ ಇಂಗಳಗಾಂವಿ “ಆಕ್ಸಿಜನ್‌ ಸಮೇತ ಆಂಬ್ಯುಲೆನ್ಸ್‌’ ಸೇವೆಯನ್ನು ಉಚಿತವಾಗಿ ಮಾಡುತ್ತಿದ್ದಾರೆ.

ಜಿಲ್ಲಾಡಳಿತ ಭವನದಿಂದ ತುರ್ತು ವಾಹನದ ಅನುಮತಿ ಪಡೆದಿರುವ ಅವರು ತಮ್ಮ ಸ್ವಂತ ವಾಹನವನ್ನು ಸಂಶಯಾಶ³ದ ರೋಗಿಗಳ ಸೇವೆಗೆ ಮೀಸಲಿರಿಸಿದ್ದಾರೆ.

ಮೊಬೈಲ್‌ ನಂ. 7676384803 ಕರೆ ಮಾಡಿದರೆ ಜಮಖಂಡಿ ಉಪವಿಭಾಗದಲ್ಲಿ ಆಕ್ಸಿಜನ್‌ ಸಮೇತ ಆಂಬ್ಯುಲೆನ್ಸ್‌ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ.

ಕಳೆದ ವರ್ಷ ಪ್ರವಾಹ ಸಂದರ್ಭದಲ್ಲಿ ಮನೆ-ಮನೆಗೆ ತೆರಳಿ ಆಹಾರ, ಧಾನ್ಯ ವಿತರಿಸಿರುವ ಇವರು ಮುಳುಗಡೆಯಾದ ಮನೆಗಳಿಗೆ ತೆರಳಿ ಸಹಾಯ ಮಾಡಿದ್ದಾರೆ. ಕೋವಿಡ್‌-19 ಸಂದರ್ಭದಲ್ಲಿ ಬಡವರಿಗೆ, ದಿನದಲಿತರಿಗೆ ಮತ್ತು ನಿರ್ಗತಿಕರಿಗೆ ಹಣ್ಣು, ಆಹಾರ, ಧಾನ್ಯ, ತರಕಾರಿ ಅಗತ್ಯ ವಸ್ತುಗಳನ್ನು ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani