Dailyhunt
ಕಟಪಾಡಿ : ಸಮುದ್ರದಲ್ಲಿ ಬೋಟ್ ಮುಳುಗಡೆ, ಇಬ್ಬರ ರಕ್ಷಣೆ

ಕಟಪಾಡಿ : ಸಮುದ್ರದಲ್ಲಿ ಬೋಟ್ ಮುಳುಗಡೆ, ಇಬ್ಬರ ರಕ್ಷಣೆ

ಕಟಪಾಡಿ : ಮಲ್ಪೆ ಬಂದರಿನಿಂದ ಹೊರಟಿದ್ದ ಮೀನುಗಾರಿಕಾ ಬೋಟೊಂದು ಸಮುದ್ರದಲ್ಲಿ ಮುಳುಗಿದ್ದು, ಇದರಲ್ಲಿದ್ದ ಬಿಹಾರ ಮೂಲದ ಇಬ್ಬರು ಯುವಕರು, ಬೇರೆ ಬೋಟ್ ನೆರವಿನಿಂದ ಸುರಕ್ಷಿತವಾಗಿ ಮಟ್ಟು ಬೀಚಿನ ದಡ ಸೇರಿದ್ದಾರೆ

ಶನಿವಾರ ಈ ಘಟನೆ ನಡೆದಿದ್ದು, ಬೋಟೊಂದು ಕಡಲ ಅಬ್ಬರಕ್ಕೆ ಮುಳುಗಿದ್ದ ಸಂದರ್ಭ ಇವರು ಟ್ಯೂಬ್ ಅಳವಡಿಸಿಕೊಂಡು ಈಜುತ್ತಾ ದಡ ಸೇರುವ ಸಾಹಸ ಮಾಡಿದ್ದಾರೆ. ಇದೆ ಸಂದರ್ಭದಲ್ಲಿ ಬೋಟ್ ವೊಂದರ ನೆರವು ಪಡೆದು, ಪ್ರಾಣ ಉಳಿಸಿಕೊಂಡಿದ್ದಾರೆ. ಈ ವೇಳೆ ಒಬ್ಬ ಕಡಲಿನ ತೆರೆಗಳ ಅಬ್ಬರದಲ್ಲಿ ಕಣ್ಮರೆಯಾಗಿದ್ದಾನೆ.

ಸ್ಥಳೀಯರ ಮತ್ತು ವಿವಿಧ ಇಲಾಖಾಧಿಕಾರಿಗಳ ಸಹಕಾರದಿಂದ ಯುವಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani