Dailyhunt Logo
  • Light mode
    Follow system
    Dark mode
    • Play Story
    • App Story
ಕೆಂಪೇಗೌಡ ಏರ್ಪೋರ್ಟ್‌ನಲ್ಲಿ 5.28 ಕೋಟಿ ರೂ. ಡ್ರಗ್ಸ್  ಜಪ್ತಿ

ಕೆಂಪೇಗೌಡ ಏರ್ಪೋರ್ಟ್‌ನಲ್ಲಿ 5.28 ಕೋಟಿ ರೂ. ಡ್ರಗ್ಸ್ ಜಪ್ತಿ

ದೇವನಹಳ್ಳಿ: ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2 ಪ್ರಕರಣಗಳಲ್ಲಿ 5.28 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶಕ್ಕೆ ಪಡೆಯಲಾಗಿದೆ. ಬ್ಯಾಂ ಕಾ ಕ್‌ ನಿಂದ ಬಂದಿದ್ದ ಪ್ರಯಾಣಿಕನ ಬ್ಯಾಗೇಜ್ ತಪಾಸಣೆ ವೇಳೆಯಲ್ಲಿ 1.1 ಕೋಟಿ ರೂ. ಮೌಲ್ಯದ 3.13 ಕೆ.ಜಿ ಹೈಡ್ರೋ ಫೋನಿಕ್‌ ಗಾಂಜಾ ಪತ್ತೆಯಾಗಿದೆ.

ಇದೇ ಮಾದರಿ ಯಲ್ಲಿ ಮತ್ತೂಂದು ಪ್ರಕರಣ ಬೆಳಕಿಗೆ ಬಂದಿದೆ.

ಬ್ಯಾಂಕಾಕ್‌ನಿಂದ ಬಂದಿದ್ದ ಮತ್ತೊಬ್ಬ ಪ್ರಯಾಣಿಕನ ಬ್ಯಾಗೇಜ್‌ ಪರಿಶೀಲಿಸಿದಾಗ 4.18 ಕೋಟಿ ರೂ. ಮೌಲ್ಯದ 11.93 ಕೆ.ಜಿ ಹೈಡ್ರೋ ಫೋನಿಕ್‌ ಗಾಂಜಾ ಪತ್ತೆಯಾಗಿದೆ. ಎರಡು ಪ್ರಕರಣಗಳಲ್ಲಿ ಆರೋಪಿಗಳನ್ನು ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ಬಂಧಿಸಲಾಗಿದೆ.

ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ಯುವಕ ಸೆರೆ
ಕಾಲೇಜು ರಸ್ತೆಯಲ್ಲಿ ಹೈಡ್ರೋ ಗಾಂಜಾ ಮಾರಾಟ ಮಾಡು ತ್ತಿದ್ದ ಕೇರಳ ಮೂಲದ ಆರೋಪಿಯನ್ನು ಬಾಲಗೂರು ಪೊಲೀಸರು ಬಂಧಿಸಿದ್ದಾರೆ. ಅಶ್ವಿನ್‌ ಟಾಮ್‌ ಜೋಶ್‌ (24) ಬಂಧಿತ ಆರೋಪಿ.

ಈತನಿಂದ 9 ಲಕ್ಷ ರೂ.ಮೌಲ್ಯದ 276 ಗ್ರಾಂ ಹೈಡ್ರೋ ಗಾಂಜಾ ವನ್ನು ಜಪ್ತಿ ಮಾಡಿದ್ದಾರೆ. ಮಿಟ್ಟಗಾನಹಳ್ಳಿ ಗ್ರಾಮದ ಕಡೆಗೆ ಹೋಗುವ ಕಾಲೇಜು ಸಮೀಪ ಆ.17ರಂದು ಮಧ್ಯಾಹ್ನ 1 ಗಂಟೆ ವೇಳೆ ಬ್ಯಾಗಿನಲ್ಲಿ ಗಾಂಜಾ ಸಂಗ್ರಹಿಸಿಕೊಂಡು, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಪೊಲೀಸರು ಆತನನ್ನು ಡ್ರಗ್ಸ್‌ ಸಮೇತ ಬಂಧಿಸಿದ್ದರು. ಆರೋಪಿ ಕಡಿಮೆ ಬೆಲೆಗೆ ಡ್ರಗ್ಸ್‌ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani