ಉದಯವಾಣಿ

1.3M Followers

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ದೊಡ್ಡ ಪ್ರಮಾಣದಲ್ಲಿ ಡಿಎ ಏರಿಕೆ ಮಾಡಿದ ಸರ್ಕಾರ

18 Apr 2021.12:14 PM

ನವ ದೆಹಲಿ : ಕೋವಿಡ್ ಸೋಂಕು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ಹಲವಾರು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಸುಮಾರು 52 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ (Dearness Allowance)ಯನ್ನು ಶೇ. 17 ರಿಂದ ಶೇ. 28 ಕ್ಕೆ ಏರಿಕೆ ಮಾಡಿ ಘೋಷಣೆ ಮಾಡಿದೆ.

ಈ ಸೌಲಭ್ಯವು ಬರುವ ಜುಲೈ 1 ರಿಂದ ನೌಕರರಿಗೆ ಜಾರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ. ಇದರ ನಂತರ, ಕೇಂದ್ರ ನೌಕರರ ಡಿಎ( Dearness Allowance) ಶೇ. 17 ರಿಂದ ಶೇ. 28 ಕ್ಕೆ ಏರಿಕೆಯಾಗುತ್ತದೆ. ಇದರಲ್ಲಿ ಶೇ. 3 ಮತ್ತು ಶೇ.4 ಪ್ರತಿಶತದಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ. ಎಂದುಯ ವರದಿ ತಿಳಿಸಿದೆ.

ಓದಿ : ಮತ್ತೊಂದು ಪ್ರತಿಷ್ಠಿತ ಕಂಪೆನಿಗೆ ರಶ್ಮಿಕಾ ಮಂದಣ್ಣ ರಾಯಭಾರಿ

7 ನೇ ವೇತನ ಆಯೋಗ (7th pay commission)ದ ನಿಯಮಗಳ ಪ್ರಕಾರ, ನೌಕರರ ಮೂಲ ವೇತನವನ್ನು ಫಿಟ್‌ ಮೆಂಟ್ ಅಂಶದಿಂದ ಗುಣಿಸಲಾಗುತ್ತದೆ.

ಈ ಫಿಟ್‌ ಮೆಂಟ್ ಫ್ಯಾಕ್ಟರ್ 2.57 ಆಗಿದೆ. ಇದು ಸರ್ಕಾರಿ ನೌಕರರ ಮಾಸಿಕ ವೇತನವನ್ನು ಹೆಚ್ಚಿಸುತ್ತದೆ. ಇದು ಭತ್ಯೆಯನ್ನು ಒಳಗೊಂಡಿಲ್ಲ. ಆದ್ರೆ, ಪ್ರಯಾಣ ಭತ್ಯೆ ಅಂದರೆ ಟಿಎ ವಿಸ್ತರಿಸಲಾಗುತ್ತದೆ, ಬಾಕಿ ಇರುವ ಡಿಎ ಅನ್ನು ಸಂಬಳಕ್ಕೆ ಸೇರಿಸಲಾಗುತ್ತದೆ.

ಈ ಬದಲಾವಣೆಗಳಿಂದ ಲಕ್ಷಾಂತರ ಕೇಂದ್ರ ನೌಕರರು ಲಾಭ ಪಡೆಯುವ ನಿರೀಕ್ಷೆಯಿದೆ. ಇದೀಗ ಈ ತಮ್ಮ ಡಿಎ ಪಡೆಯಲು ಕಾಯುತ್ತಿದ್ದಾರೆ, ಇಲ್ಲಿ ನಾವು ರಾತ್ರಿಯಲ್ಲಿ ಕರ್ತವ್ಯ ನಿರ್ವಹಿಸುವ ನೌಕರರ ಬಗ್ಗೆ ಮಾತನಾಡುತ್ತಿದ್ದೇವೆ, ಜುಲೈನಿಂದ ಡಿಎ, ಡಿಆರ್ ಪ್ರಾರಂಭವಾದಾಗ, ನಂತರ ನೈಟ್ ಡ್ಯೂಟಿ ಭತ್ಯೆ ಸಹ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.

ಓದಿ : ಗತಕಾಲದ ವೈಭವ ಸಾರುವ ಕೋಟಿ ಚೆನ್ನಯ ಥೀಮ್ ಪಾರ್ಕ್

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Udayavani

#Hashtags