Dailyhunt Logo
  • Light mode
    Follow system
    Dark mode
    • Play Story
    • App Story
ಕೆಸರಿಗೋಸ್ಕರ ಉಸಿರು ಬಿಟ್ಟವರೇ ಜಾಸ್ತಿ.. ಪ್ರತಿಷ್ಠೆ, ಪ್ರತೀಕಾರದ ಸುತ್ತ ಸಾಗುವ ʼಕರಾವಳಿʼ

ಕೆಸರಿಗೋಸ್ಕರ ಉಸಿರು ಬಿಟ್ಟವರೇ ಜಾಸ್ತಿ.. ಪ್ರತಿಷ್ಠೆ, ಪ್ರತೀಕಾರದ ಸುತ್ತ ಸಾಗುವ ʼಕರಾವಳಿʼ

ಬೆಂಗಳೂರು: ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ (Prajwal Devaraj) ಅಭಿನಯದ ʼಕರಾವಳಿʼ (Karavali Movie) ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದೆ.

ʼಕಂಬಳದ ಕಿಚ್ಚು ಹುಟ್ಟಿದ್ದು ಕರಾವಳಿʼಯಲ್ಲಿ ಎನ್ನುವ ಹಿನ್ನೆಲೆ ಧ್ವನಿಯೊಂದಿಗೆ ಟ್ರೇಲರ್‌ ಆರಂಭವಾಗುತ್ತದೆ.

ಕಂಬಳದ ವೇದಿಕೆಯಲ್ಲಿ ಬೆಂಕಿ ಅದರ ಜತೆ ಮಳೆ ಆಗುವ ದೃಶ್ಯವನ್ನು ಆರಂಭದಲ್ಲಿ ತೋರಿಸಲಾಗಿದೆ.

ʼಕಿಚ್ಚಿಗೂ ಕರಾವಳಿಗೂ ಮಧ್ಯದಲ್ಲಿ ಇದಿದ್ದು ಒಂದುʼ ಕುರ್ಚಿ ಎಂದು ಅಧಿಕಾರ - ಅಂತಸ್ತನ್ನು ತೋರಿಸಲಾಗಿದೆ.

ʼಮಾವೀರʼನಾಗಿ ರಾಜ್‌ ಬಿ ಶೆಟ್ಟಿ ಕಾಣಿಸಿಕೊಂಡಿದ್ದು, ಕಂಬಳ ಗದ್ದೆಯಲ್ಲಿ ʼಮಾವೀರʼನೇ ನಾಯಕ ಎನ್ನುವಂತೆ ಆ ಪಾತ್ರವನ್ನು ಚಿತ್ರೀರಿಸಲಾಗಿದೆ.

30 ವರ್ಷಗಳಿಂದ ನಿಂತಿರುವ ʼಕೋಟಿ - ಚೆನ್ನೆಯ್ಯʼ ಕಂಬಳದ ಸುತ್ತ ಚಿತ್ರದ ಕಥೆ ಸಾಗಲಿದೆ. ರಕ್ತ, ಪ್ರತೀಕಾರದ ಮೂಲಕವೇ ʼಕಂಬಳʼ ಮತ್ತೆ ಆರಂಭವಾಗಬೇಕೆನ್ನುವ ಬಲಾಢ್ಯರ (ಧಣಿಗಳ) ನಡುವಿನ ಪಾತ್ರದ ಝಲಕ್‌ ತೋರಿಸಲಾಗಿದೆ.

ಕೋಣಗಳನ್ನು ಓಡಿಸುತ್ತಿದ್ದ ʼಮಹಾಬಲ - ಮಾವೀರʼ ಧಣಿಗಳ ಎದುರೇ ತೊಡೆ ತಟ್ಟಿ ನಿಲ್ಲುವ ಸಾಹಸ ಹಾಗೂ ಹೋರಾಟದ ಕಥೆ ಚಿತ್ರದಲ್ಲಿ ಇರಲಿದೆ. ಅಷ್ಟಮಂಗಲ, ಪ್ರೇಮ ಕತೆ, ಹಾಸ್ಯದ ಅಂಶಗಳು ಟ್ರೇಲರ್‌ನಲ್ಲಿ ಬಂದು ಹೋಗುತ್ತದೆ.

ರಮೇಶ್‌ ಇಂದಿರಾ ಧಣಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಿತ್ರ ಪ್ರಮುಖ ಪಾತ್ರವನ್ನು ಮಾಡಿದ್ದಾರೆ.

ಸಂಪದಾ, ಸುಶ್ಮಿತಾ ಅವರು ನಾಯಕಿರಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಸಣ್ಣ ಲುಕ್‌ ಟ್ರೇಲರ್‌ನಲ್ಲಿ ಬಂದು ಹೋಗುತ್ತದೆ.

ʼಕೆಸರಿಗೋಸ್ಕರ ಉಸಿರು ಬಿಟ್ಟವರೇ ಜಾಸ್ತಿ..ʼ, ʼತಲೆಮಾರುಗಳು ಹುಟ್ಟುವ ಮೊದಲೇ ವೈರತ್ವ ಹುಟ್ಟಿದೆ. ಇದು ಮುಗಿಯದ ವೈರತ್ವದ ಮುಂದುವರೆದ ಅಧ್ಯಾಯʼ ಎನ್ನುವಂತಹ ಡೈಲಾಗ್‌ಗಳು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

ಸಚಿನ್‌ ಬಸ್ರೂರು ಅವರ ಸಂಗೀತ, ರುದ್ರ ಅವರ ಕ್ಯಾಮೆರಾ ವರ್ಕ್‌ ಪ್ರತಿ ದೃಶ್ಯವನ್ನು ಅದ್ಭುತವಾಗಿ ಮೂಡಿ ಬರುವಂತೆ ಮಾಡಿದೆ.

ಪ್ರತಿಷ್ಠೆ, ಪ್ರತೀಕಾರದ ಸುತ್ತ ಸಾಗುವ ʼಕಂಬಳ ಗದ್ದೆʼಯ ರೋಚಕ ಕಥೆಯನ್ನು ಗುರುದತ್‌ ಗಾಣಿಗ ಹಣೆದಿದ್ದಾರೆ.

ಕಥೆಯ ಜತೆ ʼಕರಾವಳಿʼಯ ಸಂಸ್ಕೃತಿಯನ್ನೂ ಕೂಡ ಚಿತ್ರಿಸಲಾಗಿದೆ.

ಇದೇ ಜು.24ಕ್ಕೆ ಚಿತ್ರ ರಿಲೀಸ್‌ ಆಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani